07 August 2026 |

ವಿಟ್ಲ: ಕೆರೆಗೆ ಬಿದ್ದು ಕೂಲಿ ಕಾರ್ಮಿಕ ದಾರುಣ ಸಾವು

  • 07 Aug 2026 09:40:29 AM

ವಿಟ್ಲ: ಅಡ್ಯನಡ್ಕ ಸಮೀಪದ ಮನಿಮುಂಡ ಪ್ರದೇಶದಲ್ಲಿ ನಡೆದ ದುರ್ಘಟನೆಯಲ್ಲಿ ಕಾಲು ಜಾರಿ ಕೆರೆಗೆ ಬಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

 

ಮೃತಪಟ್ಟವರು ದಿನೇಶ್ ನಾಯ್ಕ (32) ಎಂದು ಗುರುತಿಸಲಾಗಿದೆ. ಅವರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

 

ದಿನೇಶ್ ಅವರ ನಿಧನದಿಂದ ಪತ್ನಿ ಹಾಗೂ ತಂದೆ-ತಾಯಿ ದುಃಖದಲ್ಲಿ ಮುಳುಗಿದ್ದಾರೆ. ಘಟನೆಯ ಮಾಹಿತಿ ತಿಳಿದ ವಿಟ್ಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.