11 August 2026 |

ವಿದ್ಯುತ್ ಸ್ಪರ್ಶದಿಂದ ನವಿಲು ಸಾವು; ಅದನ್ನು ತಿನ್ನಲು ಬಂದ ಚಿರತೆಗೂ ಅದೇ ಗತಿ!

  • 11 Aug 2026 01:38:03 PM

ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ನವಿಲನ್ನು ತಿನ್ನಲು ಬಂದ ಚಿರತೆಯೂ ಅದೇ ವಿದ್ಯುತ್‌ಗೆ ಬಲಿಯಾಗಿದೆ! ಈ ಅಪರೂಪದ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.

 

ನವಿಲನ್ನು ತಿನ್ನಲು ಬಂದ ಚಿರತೆ ಟ್ರಾನ್ಸ್‌ಫಾರ್ಮರ್ ಮೇಲೆ ಹತ್ತಿದ ವೇಳೆ ವಿದ್ಯುತ್ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

 

ಈ ಅಸಾಮಾನ್ಯ ಘಟನೆ ಹೊಸದುರ್ಗ ತಾಲೂಕಿನ ಕಬ್ಬಿಣಕೆರೆ ಗ್ರಾಮದಲ್ಲಿ ನಡೆದಿದೆ. ಮೊದಲು ನವಿಲೊಂದು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿತ್ತು. ಬಳಿಕ ಅಲ್ಲಿಗೆ ಬಂದ ಚಿರತೆ, ನವಿಲನ್ನು ತಿನ್ನಲು ಟ್ರಾನ್ಸ್‌ಫಾರ್ಮರ್ ಮೇಲೆ ತೆರಳಿದಾಗ ವಿದ್ಯುತ್ ಪ್ರವಾಹಕ್ಕೆ ಸಿಲುಕಿದೆ ಎನ್ನಲಾಗಿದೆ.

 

ಚಿರತೆ ಟ್ರಾನ್ಸ್‌ಫಾರ್ಮರ್ ಮೇಲೆಯೇ ಮೃತಪಟ್ಟಿರುವುದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ಘಟನೆ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

ಬಳಿಕ ಮೃತಪಟ್ಟ ನವಿಲು ಹಾಗೂ ಚಿರತೆಯ ಮೃತದೇಹಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಳ್ಳಲಾಗಿದೆ.