04 September 2026 |

‘4,000ಕ್ಕೂ ಹೆಚ್ಚು ಪಕ್ಷದ ಕಚೇರಿಗಳನ್ನು ಲೂಟಿ ಮಾಡಿದ್ದಾರೆ’: ಮಮತಾ ಬ್ಯಾನರ್ಜಿ ಆರೋಪ

  • 03 Sep 2026 08:58:31 PM

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ತಮ್ಮ ಪಕ್ಷದ ವಿರುದ್ಧ ದೌರ್ಜನ್ಯ ನಡೆಯುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

 

ಎಲ್ಲ ರಾಜಕೀಯ ಪಕ್ಷಗಳೊಂದಿಗೆ ತಾವು ಮಾತನಾಡುತ್ತಿರುವುದಾಗಿ ಹೇಳಿದ ಅವರು, ತಮ್ಮ ಪಕ್ಷದ ಪ್ರಸ್ತುತ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದಿದ್ದಾರೆ.

 

“ನಮ್ಮ ಪಕ್ಷದ 4,000ಕ್ಕೂ ಹೆಚ್ಚು ಕಚೇರಿಗಳನ್ನು ಲೂಟಿ ಮಾಡಿದ್ದಾರೆ. ನಮ್ಮನ್ನು ಮನೆಗಳಿಂದ ಹೊರಗೆ ಬರಲು ಕೂಡ ಬಿಡುತ್ತಿಲ್ಲ. ಇಂತಹ ದೌರ್ಜನ್ಯ ದೇಶದ ಬೇರೆಡೆ ನಡೆದಿಲ್ಲ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

 

ಇತ್ತೀಚೆಗೆ ಕೋಲ್ಕತ್ತಾದ ಟಿಎಂಸಿ ಕಚೇರಿಯೊಂದರ ಮೇಲೆ ದಾಳಿ ನಡೆದಿರುವ ಬಗ್ಗೆ ಕೂಡ ಪಕ್ಷದ ನಾಯಕರು ಆರೋಪಿಸಿದ್ದು, ಈ ವಿಚಾರವಾಗಿ ಬಿಜೆಪಿ ಮತ್ತು ಟಿಎಂಸಿ ನಡುವೆ ವಾಗ್ವಾದ ತೀವ್ರಗೊಂಡಿದೆ.