ಮಂಗಳೂರು: ರಾಜ್ಯದ ವಿದ್ಯುತ್ ಪ್ರಸರಣ ವ್ಯವಸ್ಥೆಯಲ್ಲಿ ಖಾಸಗಿ ಕಂಪೆನಿಗಳಿಗೆ ಅವಕಾಶ ನೀಡಲಾಗುತ್ತಿದ್ದು, ಇದರಿಂದ ಭವಿಷ್ಯದಲ್ಲಿ ಗ್ರಾಹಕರ ಮೇಲೆ ಹೆಚ್ಚುವರಿ ಹೊರೆ ಬೀಳುವ ಆತಂಕ ವ್ಯಕ್ತವಾಗಿದೆ.
ಬೂಟ್ ಮಾದರಿಯಲ್ಲಿ ಖಾಸಗಿ ಸಂಸ್ಥೆಗಳು ವಿದ್ಯುತ್ ಪ್ರಸರಣ ಮಾರ್ಗಗಳನ್ನು ನಿರ್ಮಿಸಿ 35 ವರ್ಷಗಳ ಕಾಲ ನಿರ್ವಹಿಸಲಿವೆ. ಇದರ ವಾರ್ಷಿಕ ವೆಚ್ಚವನ್ನು ಕೆಪಿಟಿಸಿಎಲ್ ಎಸ್ಕಾಂಗಳಿಂದ ವಸೂಲಿ ಮಾಡಲಿದೆ.
ರಾಷ್ಟೆ, ಹಂಪಾಪುರ ಮತ್ತು ಮೆಖಾಲಿ ಯೋಜನೆಗಳಿಗೆ ಮಾತ್ರ ವರ್ಷಕ್ಕೆ ಒಟ್ಟು ₹1,225 ಕೋಟಿ ಪ್ರಸರಣ ಸೇವಾ ಶುಲ್ಕ ಪಾವತಿಸಬೇಕಾಗಿದೆ. ಇದೇ ಮಾದರಿಯ ಇನ್ನೂ ಸುಮಾರು 20 ಯೋಜನೆಗಳು ಪ್ರಸ್ತಾವಿತವಾಗಿವೆ.
ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಪ್ರಸರಣ ಸಾಮರ್ಥ್ಯವಿರುವಾಗ ಹೊಸ ಖಾಸಗಿ ಯೋಜನೆಗಳ ಅಗತ್ಯವೇನು ಎಂದು ಎಸ್ಕಾಂಗಳು ಪ್ರಶ್ನಿಸಿವೆ. ಹೆಚ್ಚುವರಿ ವೆಚ್ಚವನ್ನು ಎಸ್ಕಾಂಗಳು ಗ್ರಾಹಕರ ಮೇಲೆ ವರ್ಗಾಯಿಸುವ ಸಾಧ್ಯತೆಯೂ ಇದೆ ಎಂಬ ಆತಂಕ ವ್ಯಕ್ತವಾಗಿದೆ.





