01 October 2026 |

ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ: ಬೆಂಗಳೂರಿನಿಂದ ಗೋವಾದ ಮಡಗಾಂವ್ ಗೆ ವಿಶೇಷ ರೈಲು

  • 30 Sep 2026 10:51:58 AM

ಮಂಗಳೂರು: ಕರಾವಳಿ ಭಾಗಕ್ಕೆ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಕಂಟೋನ್ಮೆಂಟ್‌ನಿಂದ ಮಡಗಾಂವ್‌ವರೆಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸಲಿದೆ.

 

06597 ಸಂಖ್ಯೆಯ ವಿಶೇಷ ರೈಲು ಅಕ್ಟೋಬರ್ 1ರಂದು ರಾತ್ರಿ 11:50ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಟು, ಅಕ್ಟೋಬರ್ 2ರಂದು ಸಂಜೆ 6:10ಕ್ಕೆ ಮಡಗಾಂವ್ ತಲುಪಲಿದೆ.

 

ಇದೇ ರೈಲು 06598 ಸಂಖ್ಯೆಯೊಂದಿಗೆ ಅಕ್ಟೋಬರ್ 4ರಂದು ಬೆಳಗ್ಗೆ 8:40ಕ್ಕೆ ಮಡಗಾಂವ್‌ನಿಂದ ಬೆಂಗಳೂರಿನತ್ತ ವಾಪಸ್ ಪ್ರಯಾಣ ಆರಂಭಿಸಲಿದೆ.

 

ಈ ವಿಶೇಷ ರೈಲಿಗೆ ಹಾಸನ, ಸಕಲೇಶಪುರ, ಸುರತ್ಕಲ್, ಉಡುಪಿ, ಕುಂದಾಪುರ ಹಾಗೂ ಕಾರವಾರ ಸೇರಿದಂತೆ ಮಾರ್ಗಮಧ್ಯದ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗಿದೆ. ಇದರಿಂದ ಬೆಂಗಳೂರು ಮತ್ತು ಕರಾವಳಿ ಭಾಗಗಳ ನಡುವೆ ಪ್ರಯಾಣಿಸುವವರಿಗೆ ಹೆಚ್ಚಿನ ಅನುಕೂಲವಾಗಲಿದೆ.