ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಪ್ರತಿಯೊಂದು ಶನಿವಾರವೂ ರಜೆ ಇರಲಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಈ ಬಗ್ಗೆ PIB Fact Check ಸ್ಪಷ್ಟನೆ ನೀಡಿದ್ದು, ವೈರಲ್ ಆಗಿರುವ ನೋಟಿಸ್ ನಕಲಿ ಎಂದು ತಿಳಿಸಿದೆ.
ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಅಕ್ಟೋಬರ್ 2ರಂದು ದೇಶದ ಬ್ಯಾಂಕ್ ಶಾಖೆಗಳು ರಜೆ ಹೊಂದಿವೆ.
ಆದರೆ ಅಕ್ಟೋಬರ್ 3 ಮೊದಲ ಶನಿವಾರವಾಗಿರುವುದರಿಂದ ಬ್ಯಾಂಕ್‌ಗಳಿಗೆ ಸಾಮಾನ್ಯ ಕಾರ್ಯದಿನವಾಗಿದೆ.
ಪ್ರಸ್ತುತ ನಿಯಮದಂತೆ ಪ್ರತಿ ತಿಂಗಳ ಎರಡನೇ ಹಾಗೂ ನಾಲ್ಕನೇ ಶನಿವಾರ ಮಾತ್ರ ಬ್ಯಾಂಕ್‌ಗಳಿಗೆ ನಿಯಮಿತ ರಜೆ ಇರುತ್ತದೆ.





