03 October 2026 |

8 ವಿಮಾನ ನಿಲ್ದಾಣಗಳಲ್ಲಿ ಫುಲ್ ಬಾಡಿ ಸ್ಕ್ಯಾನರ್; ಪ್ರಯಾಣಿಕರ ಭದ್ರತೆಗೆ ಹೊಸ ತಂತ್ರಜ್ಞಾನ

  • 02 Oct 2026 05:18:55 PM

ಮಂಗಳೂರು: ಪ್ರಯಾಣಿಕರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ದೇಶದ ಎಂಟು ವಿಮಾನ ನಿಲ್ದಾಣಗಳಲ್ಲಿ ಫುಲ್ ಬಾಡಿ ಸ್ಕ್ಯಾನರ್‌ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ.

 

ಬೆಂಗಳೂರು ಮತ್ತು ಕೊಚ್ಚಿ ವಿಮಾನ ನಿಲ್ದಾಣಗಳಲ್ಲಿ ಈಗಾಗಲೇ ಈ ತಂತ್ರಜ್ಞಾನದ ಪರೀಕ್ಷಾ ಕಾರ್ಯ ನಡೆಯುತ್ತಿದೆ ಎಂದು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (BCAS) ತಿಳಿಸಿದೆ.

 

ದೆಹಲಿ, ಹೈದರಾಬಾದ್ ಸೇರಿದಂತೆ ಇತರೆ ವಿಮಾನ ನಿಲ್ದಾಣಗಳಲ್ಲೂ ಸ್ಕ್ಯಾನರ್‌ಗಳನ್ನು ಅಳವಡಿಸುವ ಪ್ರಕ್ರಿಯೆ ಮುಂದುವರಿದಿದೆ.

 

ಭದ್ರತೆಯ ಜೊತೆಗೆ ಪ್ರಯಾಣಿಕರ ವೈಯಕ್ತಿಕ ಗೌಪ್ಯತೆಗೂ ಆದ್ಯತೆ ನೀಡಲಾಗುತ್ತಿದ್ದು, ಅದರಂತೆ ತಂತ್ರಜ್ಞಾನವನ್ನು ಪರೀಕ್ಷಿಸಲಾಗುತ್ತಿದೆ.

 

ಈ ಸ್ಕ್ಯಾನರ್‌ಗಳಲ್ಲಿ ವ್ಯಕ್ತಿಯ ದೇಹದ ನೈಜ ಚಿತ್ರ ಕಾಣಿಸದೆ, ಕೇವಲ ದೇಹದ ಮಾದರಿ ಮಾತ್ರ ಪ್ರದರ್ಶಿಸುವ ರೀತಿಯಲ್ಲಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.