29 October 2026 |

ಪುತ್ತೂರಿನಲ್ಲಿ ಪಿಕಪ್ ವಾಹನ ಪಲ್ಟಿ: ಚಾಲಕ ಮೃತ್ಯು

  • 28 Oct 2026 07:20:34 PM

ಪುತ್ತೂರು: ತೆಂಗಿನಕಾಯಿ ಸಾಗಿಸುತ್ತಿದ್ದ ಪಿಕಪ್ ವಾಹನವೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಪುತ್ತೂರಿನ ಕೋಡಿಂಬಾಡಿ ಅರ್ಭಿ ಸಮೀಪ ನಡೆದಿದೆ.

 

ಮೃತರನ್ನು ಪುತ್ತೂರಿನ ಬನ್ನೂರು ನಿವಾಸಿ ಪ್ರಸಾದ್ ಎಂದು ಗುರುತಿಸಲಾಗಿದೆ. ಅಪಘಾತದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.