05 November 2026 |

ಬಸ್ ಪ್ರಯಾಣಿಕರಿಗೆ ದರ ಏರಿಕೆ ಶಾಕ್: KSRTC, BMTC ಟಿಕೆಟ್ ದರ ಹೆಚ್ಚಳ ಇಂದಿನಿಂದ ಜಾರಿ!

  • 05 Nov 2026 09:02:34 AM

ಬೆಂಗಳೂರು: ಕರ್ನಾಟಕದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಪ್ರಯಾಣಿಕರಿಗೆ ಮತ್ತೊಂದು ಹೊರೆ ಎದುರಾಗಿದೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಟಿಕೆಟ್ ದರವನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದ್ದು, ನವೆಂಬರ್ 4ರ ಮಧ್ಯರಾತ್ರಿಯಿಂದ ಹೊಸ ದರಗಳು ಅನ್ವಯವಾಗಲಿವೆ.

 

ದರ ಪರಿಷ್ಕರಣೆಯ ಬಳಿಕ KSRTC ಬಸ್‌ಗಳ ಟಿಕೆಟ್ ದರದಲ್ಲಿ ಗರಿಷ್ಠ ₹9 ಹಾಗೂ ಬೆಂಗಳೂರಿನ BMTC ಬಸ್‌ಗಳಲ್ಲಿ ಗರಿಷ್ಠ ₹10 ಹೆಚ್ಚಳವಾಗಲಿದೆ. ಇದರಿಂದ ದಿನನಿತ್ಯ ಬಸ್ ಪ್ರಯಾಣವನ್ನೇ ಅವಲಂಬಿಸಿರುವ ಸಾರ್ವಜನಿಕರ ಜೇಬಿಗೆ ಹೆಚ್ಚುವರಿ ಹೊರೆ ಬೀಳಲಿದೆ. ಹೊಸ ದರದ ಅನ್ವಯವೇ ಪ್ರಯಾಣಿಕರಿಗೆ ಟಿಕೆಟ್ ವಿತರಿಸಲಾಗುತ್ತದೆ.