19 November 2026 |

ಮಂಗಳೂರಿನಲ್ಲಿ ಬೋಲಾಸ್ ಘಟಕದ ಮೇಲೆ ದಾಳಿ; 1,240 ಕೆ.ಜಿ. ತೆಂಗಿನ ಎಣ್ಣೆ ವಶಕ್ಕೆ

  • 18 Nov 2026 11:06:43 AM

ಮಂಗಳೂರು: ಬೋಲಾಸ್ (Bolas) ಉತ್ಪಾದನಾ ಘಟಕದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ, 1,240 ಕೆ.ಜಿ. ತೆಂಗಿನ ಎಣ್ಣೆಯನ್ನು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 

ಬೆಂಕಂಪಾಡಿಯಲ್ಲಿರುವ ಬೋಲಾಸ್ ಘಟಕಕ್ಕೆ ಅಧಿಕಾರಿಗಳು ಭೇಟಿ ನೀಡಿ ತಯಾರಿಕಾ ಪ್ರಕ್ರಿಯೆ, ಉತ್ಪನ್ನಗಳ ಗುಣಮಟ್ಟ ಹಾಗೂ ಪ್ಯಾಕಿಂಗ್ ಮತ್ತು ಲೇಬಲ್‌ಗಳಿಗೆ ಸಂಬಂಧಿಸಿದ ವಿಚಾರಗಳನ್ನು ಪರಿಶೀಲಿಸಿದ್ದಾರೆ ಎನ್ನಲಾಗಿದೆ.

 

ಈ ಕಾರ್ಯಾಚರಣೆಯಲ್ಲಿ ಸುಮಾರು 1,240 ಕೆ.ಜಿ. ತೆಂಗಿನ ಎಣ್ಣೆ ವಶಕ್ಕೆ ಪಡೆಯಲಾಗಿದ್ದು, ನಾಲ್ಕು ಬಾಕ್ಸ್‌ಗಳಷ್ಟು ಎಣ್ಣೆಯನ್ನು ಜಪ್ತಿ ಮಾಡಲಾಗಿದೆ ಎಂದು ವೈರಲ್ ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಉತ್ಪನ್ನದ ಮೇಲೆ 'Cold Pressed' ಎಂಬ ಲೇಬಲ್ ಬಳಕೆಯಾಗಿರುವ ವಿಚಾರವೂ ಪರಿಶೀಲನೆಗೆ ಒಳಪಟ್ಟಿದೆ ಎಂದು ಹೇಳಲಾಗುತ್ತಿದೆ.

 

ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಸೂಚನೆಯ ಮೇರೆಗೆ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.