ಐತಿಹಾಸಿಕ ಪುತ್ತೂರಿನ 32ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳದ ಯಶಸ್ವೀ ಅಂತ್ಯ ಮಾರ್ಚ್ 02,2025

  • 03 Mar 2025 08:53:50 AM

ಪುತ್ತೂರು, ಮಾರ್ಚ್ 02,2025 : ಐತಿಹಾಸಿಕ ಪುತ್ತೂರಿನ ಕೋಟಿ ಚೆನ್ನಯ ಜೋಡುಕರೆ ಕಂಬಳ  02ನೇ ಮಾರ್ಚ್, ರವಿವಾರ 2025 ರಂದು ಯಶಸ್ವಿಯಾಗಿ ಮುಕ್ತಾಯಗೊಂಡಿತ್ತು. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಇರುವ ದೇವರಮಾರು ಗದ್ದೆಯಲ್ಲಿ ಕಂಬಳದ ಕರೆಯಲ್ಲಿ ದಿನಾಂಕ 01ನೇ ಶನಿವಾರ ಮಾರ್ಚ್ 2025 ರಂದು ನಡೆದ ಕಂಬಳ 162 ಜೊತೆ ಕೋಣಗಳ ಪಾಲುಪಡೆಯುವಿಕೆಯಲ್ಲಿ ತುಂಬಾ ಅದ್ದೂರಿಯಾಗಿ ನಡೆಯಿತು. 

 

32ನೇ ವರ್ಷದ ಹೊನಲು ಬೆಳಕಿನ ಕಂಬಳ, ಪ್ರತಿವರ್ಷದಂತೆ ಕಂಬಳ ಅಭಿಮಾನಿಗಳಿಂದ ತುಂಬಿ ತುಳುಕುತ್ತಿತ್ತು. ಪುತ್ತೂರು ಕಂಬಳವೆಂದರೆ ಪುತ್ತೂರಿನ ಪರಿಸರ ಮತ್ತು ಪರವೂರಿನ ಎಲ್ಲಾ ಕಂಬಳ ಅಭಿಮಾನಿಗಳಿಗೆ ಜಾತ್ರೋತ್ಸವ. ಸಾವಿರಾರು ಗಟ್ಟಲೆ ಜನ ಎರಡು ದಿವಸ ಕೂಡ ಕಂಬಳ ನೋಡಿ ಮನಸೂರೆಗೊಂಡರು.

 

ಪುತ್ತೂರಿನ ಕೋಟಿ - ಚೆನ್ನಯ ಜೋಡುಕರೆ ಕಂಬಳದ ಅಧ್ಯಕ್ಷರಾದ ಎನ್. ಚಂದ್ರಹಾಸ ಶೆಟ್ಟಿ ಅಧ್ಯಕ್ಷತೆಯಲ್ಲಿ ಮತ್ತು ಇನ್ನಿತರ ಗಣ್ಯರ ಉಪಸ್ಥಿತಿಯಲ್ಲಿ ಹಾಗೂ ಕಂಬಳದ ತೀರ್ಪುಗಾರರು, ನಿರೂಪಕರು ಮತ್ತು ಸಿಬ್ಬಂದಿವರ್ಗಗಳ ಹೊಂದಾಣಿಕೆಯಲ್ಲಿ,  ನೇಗಿಲು ಕಿರಿಯ ಮತ್ತು ನೇಗಿಲು ಹಿರಿಯ, ಹಗ್ಗ ಕಿರಿಯ ಮತ್ತು ಹಗ್ಗ ಹಿರಿಯ, ಕನಹಲಗೆ ಮತ್ತು ಅಡ್ಡಹಲಗೆ ಎಂಬ ಎಲ್ಲಾ ರೀತಿಯ ಸ್ಪರ್ಧೆಗಳು ನೆರವೇರಿದವು.ಇದರ ಜೊತೆಗೆ ಕೆಸರುಗದ್ದೆ ಓಟದ ಸ್ಪರ್ಧೆ ಕೂಡ ನಡೆಯಿತು.

 

32ನೇ ವರ್ಷದ ಪುತ್ತೂರಿನ ಕೋಟಿ - ಚೆನ್ನಯ ಜೋಡು ಕರೆ ಕಂಬಳದ ಫಲಿತಾಂಶ ಈ ರೀತಿ ಇದೆ;


ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :

ಕನೆ ಹಲಗೆ: 05 ಜೊತೆ
ಅಡ್ಡಹಲಗೆ: 05 ಜೊತೆ 
ಹಗ್ಗ ಹಿರಿಯ: 22 ಜೊತೆ 
ನೇಗಿಲು ಹಿರಿಯ: 26 ಜೊತೆ 
ಹಗ್ಗ ಕಿರಿಯ: 25 ಜೊತೆ 
ನೇಗಿಲು ಕಿರಿಯ: 79 ಜೊತೆ 
ಒಟ್ಟು ಕೋಣಗಳ ಸಂಖ್ಯೆ: 162 ಜೊತೆ

ಕನೆ ಹಲಗೆ:
( ನೀರು ನೋಡಿ ಬಹುಮಾನ)

ಪ್ರಥಮ: ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ "ಎ"
ಹಲಗೆ ಮುಟ್ಟಿದವರು: ಬೈಂದೂರು ರಾಂಪನಹಿತ್ಲು ರಾಘವೇಂದ್ರ ಪೂಜಾರಿ

ದ್ವಿತೀಯ: ಬೈಂದೂರು ಸಸಿಹಿತ್ಲು ವೆಂಕಟ ಪೂಜಾರಿ
ಹಲಗೆ ಮುಟ್ಟಿದವರು: ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ

ಅಡ್ಡ ಹಲಗೆ:

ಪ್ರಥಮ: ಪುತ್ತೂರು ಸರೋವರ ಹವೀಶ ಹರೀಶ್ ಶಾಂತಿ (11.48)
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ "ಎ" (12.67)
ಹಲಗೆ ಮುಟ್ಟಿದವರು: ಮಂದಾರ್ತಿ ಭರತ್ ನಾಯ್ಕ್

ಹಗ್ಗ ಹಿರಿಯ: 

ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ "ಬಿ" (11.52)
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ

ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ "ಎ" (11.64)
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

ಹಗ್ಗ ಕಿರಿಯ:

ಪ್ರಥಮ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ "ಬಿ" (11.79)
ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ

ದ್ವಿತೀಯ: 80 ಬಡಗು ಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ "ಬಿ" (11.94)
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ

ನೇಗಿಲು ಹಿರಿಯ: 

ಪ್ರಥಮ: ಬೆಳ್ಳಿಪ್ಪಾಡಿ ಕೈಪ ಭರತ್ ಕೇಶವ ಮಂಕು ಭಂಡಾರಿ "ಎ" (11.29)
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ದ್ವಿತೀಯ: ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ (11.63)
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ

ನೇಗಿಲು ಕಿರಿಯ:

ಪ್ರಥಮ: ಮುನಿಯಾಲು ಉದಯ ಕುಮಾರ್ ಶೆಟ್ಟಿ (11.41)
ಓಡಿಸಿದವರು: ಮಾಸ್ತಿ ಕಟ್ಟೆ ಸ್ವರೂಪ್

ದ್ವಿತೀಯ: ಮಿಜಾರ್ ಹರಿಮೀನಾಕ್ಷಿ ತೋಟ ಹರಿಯಪ್ಪ ಪೂಜಾರಿ "ಎ" (11.74)
ಓಡಿಸಿದವರು: ಪಟ್ಟೆ ಗುರು ಚರಣ್