ಸಾಂದರ್ಭಿಕ ಚಿತ್ರ ಕಾಣಿಸಲಾಗಿದೆ
ವಿಟ್ಲ, ಮಾರ್ಚ್ 03, 2025 : ಬಂಟ್ವಾಳ ತಾಲೂಕು ವಿಟ್ಲ ನಗರದ ಲಾಡ್ಜ್ ನಲ್ಲಿ ರಕ್ತದೋಕುಳಿಯಿಂದ ಬಿದ್ದಿರುವ ವ್ಯಕ್ತಿಯ ದೇಹ ಕಂಡುಬಂದಿದೆ.
ಕೇರಳ ಮೂಲದ ಸುಜೇಶ್ ಎಂದು ತಿಳಿದುಬಂದಿದ್ದು, ಕಳೆದ ಮೂರೂ ನಾಲ್ಕು ದಿನಗಳಿಂದ ಈ ಲಾಡ್ಜ್ ನಲ್ಲಿ ತಂಗಿದ್ದ ಎಂಬ ಮಾಹಿತಿ ವರದಿಯಾಗಿದೆ.
ಇತನ ವಯಸ್ಸು 35 ವರುಷವಾಗಿದ್ದು, ಘಟನೆಗೆ ನಿಜವಾದ ಕಾರಣ ತಿಳಿದು ಬಂದಿಲ್ಲ. ವಿಟ್ಲ ಪೊಲೀಸರು ಇತನ ಮನೆಯವರಿಗೆ ವಿಷಯ ತಿಳಿಸಿದ್ದಾರೆ.
ಈ ವ್ಯಕ್ತಿಯನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ತನಿಖೆ ವಿಟ್ಲ ಪೊಲೀಸರು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.