ಕಲ್ಲಡ್ಕ, ಮಾರ್ಚ್ 03, 2025 : ಸೈಬರ್ ಕ್ರೈಂ ದಿನಂದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಅದಕ್ಕೆ ಬಲಿಯಾಗುವವರ ಸಂಖ್ಯೆ ಕೂಡ ಹೆಚ್ಚುಗುತ್ತಲೇ ಇದೆ. ಇಂತದೊಂದು ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ವರದಿಯಾಗಿದೆ. ಕಲ್ಲಡ್ಕದ ಕೃಷ್ಣಕೋಡಿಯ ವರುಣ್ ಈ ವಂಚನೆಗೆ ಬಲಿಯಾದ ವ್ಯಕ್ತಿ. ಈ ರೀತಿಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಿಡಿಯೋ ನೋಡಿದರೆ ಹಣ ಬರುತ್ತದೆ ಎಂಬ ಆ್ಯಪ್ ಮೂಲಕ 1.12 ಲಕ್ಷ ರೂಪಾಯಿ ಕಳೆದುಕೊಂಡಿರುವ ವಿಚಾರ ಬಂಟ್ವಾಳ ಪೊಲೀಸ್ ಠಾಣೆಗೆ ಕಂಪ್ಲೇಂಟ್ ದೊರೆಕಿದೆ. ವರುಣ್ ಮೊಬೈಲ್ ಗೆ ನವೆಂಬರ್ 8, 2024 ರಂದು ವಾಟ್ಸ್ ಆ್ಯಪ್ ಮೂಲಕ ಒಂದು ಲಿಂಕ್ ನ್ನು ಹೊಂದಿರುವ ಮೆಸೇಜ್ ಬಂದಿರುತ್ತದೆ, ಆ ಲಿಂಕ್ ನ್ನು ಒತ್ತಿದಾಗ ಆರ್ ಸಿ ಪಿ ಎನ್ನುವ ಆ್ಯಪ್ ಓಪನ್ ಆಗುತ್ತಿತ್ತಂತೆ. ಈ ಆ್ಯಪ್ ಮೂಲಕ ಅಶಕ್ತರಿಗೆ ನೆರವು ನೀಡಲಾಗುತ್ತದೆ ಎಂಬ ಮಾಹಿತಿ ಅದರಲ್ಲಿ ನಮೂದಿಸಲಾಗಿತ್ತು.
ಮೊದಲಿಗೆ ರೂ. 56,000 ಜಮೆ ಮಾಡಿ ನಂತರ ನಾವು ಕಳಿಸುವ 40 ವಿಡಿಯೋಗಳನ್ನು ಒಂದು ದಿನದಲ್ಲಿ ನೋಡಿದರೆ ನಿಮ್ಮ ಖಾತೆಗೆ ರೂ. 2,000 ದಿನ ನೀಡಲಾಗುವುದು ಎಂದು ತಿಳಿಸಲಾಗಿತ್ತು. ಅದೇ ಪ್ರಕಾರ ವರುಣ್ ರವರು ವಿಡಿಯೋ ಗಳನ್ನೂ ವೀಕ್ಷಣೆ ಮಾಡಿದ್ದೂ ಅವರಿಗೆ 1 ಲಕ್ಷ ರೂಪಾಯಿ ಜಮೆಯಾಗಿತ್ತು. ಆ ಹಣವನ್ನು ವರುಣ್ ರವರ ಖಾತೆಗೆ ವರ್ಗಾಯಿಸಲು ಮತ್ತೆ ರೂ. 56,000 ಜಮೆ ಮಾಡಬೇಕು ಎಂದು ತಿಳಿಸಿದ್ದರು. ಅದೇ ರೀತಿ ವರುಣ್ ಡಿ .13 ರಂದು ಮತ್ತೆ ಬತುಲ ಕಾರ್ತಿಕ್ ಎನ್ನು ಅಕೌಂಟ್ ಗೆ ಈ ಹಣವನ್ನು ಜಮೆ ಮಾಡಿದ್ದರು.
ಹಣಕ್ಕಾಗಿ ಮತ್ತಷ್ಟು ಕಿರುಕುಳವಾದಾಗ ತನ್ನ ಸ್ನೇಹಿತನ ಬಳಿ ವಿಚಾರ ತಿಳಿಸಿದ ಮೇಲೆ ಇದು ಒಂದು ಸೈಬರ್ ವಂಚನೆಯ ಜಾಲಕ್ಕೆ ಬಲಿಯಾಗಿರುವ ಬಗ್ಗೆ ತಿಳಿದ ಇವರು ಈಗ ಕೊನೆಯದಾಗಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ಈ ವಿಚಾರ ಮಾಧ್ಯಮಗಳಲ್ಲಿ ಪ್ರಚಾರವಾಗಿದೆ.