ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್(ASI)ರಾಗಿದ್ದ ಶ್ರೀ ವಿಜಯಕುಮಾರ್ ರವರು ಸೇವೆಯಿಂದ ನಿವೃತ್ತಿ.

  • 04 Mar 2025 08:05:11 PM

ಬಂಟ್ವಾಳ, ಮಾರ್ಚ್ 04, 2025 : ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ( ASI ) ರಾಗಿದ್ದ ಶ್ರೀ ವಿಜಯಕುಮಾರ್ ರವರು ದಿನಾಂಕ 28 ಫೆಬ್ರವರಿ 2025ನೇ ಶುಕ್ರವಾರದಂದು ತಮ್ಮ ಸುಧೀರ್ಘ ಪೊಲೀಸ್ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. 

 

ಕಳೆದ 32 ವರುಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ ಇವರು ಫೆಬ್ರವರಿ 28ನೇ ತಾರೀಕಿನಂದು ಸೇವಾ ನಿವೃತ್ತಿಯನ್ನು ಹೊಂದಿದರು. ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಠಾಣೆಗಳಲ್ಲಿ ಸೇವೆ ಸಲ್ಲಿಸಿದ ಇವರು ಸಂಚಾರ ವಿಭಾಗದಲ್ಲಿ ಬಹಳಷ್ಟು ಸುಧಾರಣೆ ತರುವಲ್ಲಿ ಪ್ರಯತ್ನ ಪಟ್ಟಿದ್ದಾರೆ.

ಇವರು ತಮ್ಮ ಸೇವೆಯ ಸಂದರ್ಭದಲ್ಲಿ ಠಾಣೆಗಳಾದ ಹಿರಿಯಡ್ಕ, ವೇಣೂರ್, ಪುತ್ತೂರು ಟೌನ್, ವಿಟ್ಲ, ಬಂಟ್ವಾಳ ಟೌನ್, ಬೆಳ್ತಂಗಡಿ ಮತ್ತು ಬಂಟ್ವಾಳ ಟ್ರಾಫಿಕ್ ಪೊಲೀಸ್ ಸ್ಟೇಷನ್ ಗಳಲ್ಲಿ ಸೇವೆ ಸಲ್ಲಿಸಿದ್ದರು. ತಮ್ಮ ನಿವೃತ್ತಿಯ ಸಂದರ್ಭದಲ್ಲಿ ಶ್ರೀಯುತರು ಬಂಟ್ವಾಳ (ಮೆಲ್ಕಾರ್) ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

 

ದಕ್ಷಿಣ ಕನ್ನಡ ಸುಪೆರಿಡೆಂಟ್ ಆಫ್ ಪೊಲೀಸ್ ಸಹಿ ಇರುವ ಕರ್ನಾಟಕ ಸ್ಟೇಟ್ ಪೊಲೀಸ್ ಇಲಾಖೆಯಿಂದ ಸರ್ಟಿಫಿಕೇಟ್ ಆಫ್ ಸರ್ವಿಸ್ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು. ಇವರ ಮುಂದಿನ ಜೀವನವು ಸುಖ, ಶಾಂತಿ, ನೆಮ್ಮದಿಯಿಂದ ಕೂಡಿಲರೆಂದು ಠಾಣೆಯ ಉನ್ನತ ಅಧಿಕಾರಿಗಳು, ಸಿಬ್ಬಂದಿಗಳು, ಕುಟುಂಬಸ್ಥರು ಮತ್ತು ಹಿತೈಷಿಗಳು ಶುಭ ಹಾರೈಸಿದ್ದಾರೆ.