ಮುಂದಿನ ವರ್ಷ ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದ್ದು ರಾಜಕೀಯ ಪಕ್ಷಗಳು ಭಾರಿ ಸಿದ್ಧತೆ ನಡೆಸುತ್ತಿವೆ. ಟಾಲಿವುಡ್ ನಟ ವಿಜಯ್ ಈಗಾಗಲೇ ತಮ್ಮ ಸ್ವಂತ ಪಾರ್ಟಿ ಕಟ್ಟಿ ತಮಿಳುನಾಡಿನಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಮುಂಬರುವ ಚುನಾವಣೆಯ ಹಿನ್ನಲೆಯಲ್ಲಿ ವಿಜಯ್ ಪಕ್ಷ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ತಮ್ಮ ಸಿಎಂ ಅಭ್ಯರ್ಥಿಯನ್ನು ಘೋಷಿಸಿದೆ. ಪಕ್ಷದ ಸಂಸ್ಥಾಪಕ ಅಧ್ಯಕ್ಷ ವಿಜಯ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿ ಕಾರ್ಯಕಾರಿ ಮಂಡಳಿ ನಿರ್ಧರಿಸಿದೆ.
ಮುಂಬರುವ ಚುನಾವಣೆಗಳಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಬದಲಾಗಿ ಏಕಾಂಗಿಯಾಗಿ ಸ್ಪರ್ದಿಸಲ್ಲಿದ್ದೇವೆ ಎಂದು ಪಕ್ಷ ಪುನರುಚ್ಚಿಸಿದೆ.
ತಮಿಳುನಾಡಿನಲ್ಲಿ ಬಿಜೆಪಿ ಪಕ್ಷವು ಉತ್ತಮ ಪ್ರದರ್ಶನ ನೀಡುವ ಬಗ್ಗೆ ನೀರಿಕ್ಷೆ ಇಟ್ಟುದ್ದು, ಇಲ್ಲಿ ನಡೆಯಲಿರುವ 2026ರ ಚುನಾವಣ ಕಣ ಭಾರಿ ರೋಚಕ ಹಾಗೂ ರೋಮಾಂಚನಕಾರಿಯಾಗಲಿದೆ.