ಬಂಟ್ವಾಳ: ಪಿಯುಸಿ ಓದುತ್ತಿದ್ದ 17 ವರ್ಷದ ತೇಜಸ್ ಎಂಬ ಅಪ್ರಾಪ್ತ ಬಾಲಕನೊಬ್ಬ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ತುಂಬೆ ಗ್ರಾಮದ ಪರ್ಲಕ್ಕೆ ಎಂಬಲ್ಲಿ ನಡೆದಿದೆ.
ತೇಜಸ್, ಸ್ಥಳೀಯ ಮೊಡಂಕಾಪು ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯಾಗಿದ್ದು, ಆ ದಿನ ಪರೀಕ್ಷೆ ಇದ್ದ ಕಾರಣ ಮರುಭಾಗ ಸಂಜೆ ಕ್ಲಾಸಿನಿಂದ ಮನೆಗೆ ಮರಳಿದ್ದನು. ತಂದೆ ಕರುಣಾಕರ ಗಟ್ಟಿ ಮತ್ತು ತಾಯಿ ಇಬ್ಬರೂ ಖಾಸಗಿ ಉದ್ಯೋಗಿಗಳಾಗಿ ಕೆಲಸ ನಿರ್ವಹಿಸುತ್ತಿದ್ದು, ಮನೆಗೆ ಬರುವಾಗ ಸಮಯ ತಡವಾಗುತ್ತದೆ.
ತಂದೆ ರಾತ್ರಿ ಮನೆಗೆ ಬಂದು ಬಾಗಿಲು ಮುಚ್ಚಿರುವುದನ್ನು ಗಮನಿಸಿ ಒಳಗೆ ಹೋಗಿದಾಗ, ಮಗ ತೇಜಸ್ ತನ್ನ ಕೋಣೆಯಲ್ಲಿ ನೇಣು ಬಿಗಿದು ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೂ ವೈದ್ಯರು ಮೃತ ಪಟ್ಟಿರುವುದಾಗಿ ಘೋಷಿಸಿದರು.
ಏಕೈಕ ಪುತ್ರನೇ ಈ ರೀತಿಯ ಮರಣ ಇಡೀ ಕುಟುಂಬಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ. ಈ ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಮಾನಸಿಕ ಒತ್ತಡ, ಪರೀಕ್ಷೆಯ ಆತಂಕ, ಅಥವಾ ವೈಯಕ್ತಿಕ ಸಮಸ್ಯೆಗಳ ಪರಿಣಾಮವೋ ಎಂಬ ಅನುಮಾನವಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸುತ್ತಿದ್ದಾರೆ.