ಲಖನೌದ ಸುಶಾಂತ್ ಗಾಲ್ಫ್ ಸಿಟಿಯಲ್ಲಿರುವ ಲುಲು ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ 20 ವರ್ಷದ ಹಿಂದೂ ಯುವತಿಗೆ, ಮಾಲ್‌ನ ಮೇಲ್ವಿಚಾರಕ ಮೊಹಮ್ಮದ್ ಫರಹಾಜ್ ಧರ್ಮ ಪರಿವರ್ತನೆಗೆ ಬಲವಂತಪಡಿಸಿದ ಮತ್ತು ಒಪ್ಪಿಕೊಳ್ಳದಿದ್ದರೆ ಕೆಲಸದಿಂದ ಅಮಾನತು ಮಾಡುವ ಬಗ್ಗೆ ಬೆದರಿಕೆ ಹಾಕಿದ ಗಂಭೀರ ಆರೋಪ ದಾಖಲಾಗಿದೆ.
ಮಹಿಳೆಯ ದೂರಿನ ಪ್ರಕಾರ, ಫರಹಾಜ್ , ಕುಡಿಯುವ ನೀರಿಗೆ ಮದ್ದು ಹಾಕಿ ಅತ್ಯಾಚಾರ ಮಾಡಿದ್ದಾನೆ ಮತ್ತು ಈ ಘಟನೆಯ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
ಹಣ, ಆಭರಣ ಹಾಗೂ ಮತ್ತೆ ಲೈಂಗಿಕ ಸಂಬಂಧಕ್ಕಾಗಿ ಬೆದರಿಕೆ ಹಾಕುತ್ತಿದ್ದನು. “ನೀನು ಇಸ್ಲಾಂ ಧರ್ಮಕ್ಕೆ ಬದಲಾಗದೆ ಇದ್ದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ” ಎಂದು ಧರ್ಮಾಂತರದ ಒತ್ತಡ ಹಾಕುತ್ತಿದ್ದ ಎನ್ನಲಾಗಿದೆ.
ಸಿಗರೆಟ್ ಕಚ್ಚಿಸಿ ಹಿಂದೂ ಯುವತಿಯ ದೇಹದಲ್ಲಿ ಗಾಯ ಮಾಡಿದ್ದ ಮತ್ತು ಪ್ರಾಣಹಾನಿಯ ಬೆದರಿಕೆ ಕೂಡ ಹಾಕಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.
ಪೀಡಿತ ಯುವತಿ ಲಖನೌ ಪೊಲೀಸ್ ಠಾಣೆಗೆ ದೂರು ನೀಡಿದ್ದು, FIR ದಾಖಲಾಗಿದೆ. ಆರೋಪಿಯನ್ನು ಜುಲೈ 9 ರಂದು ಬಂಧಿಸಲಾಗಿದೆ.
ಪೊಲೀಸರು ಅತ್ಯಾಚಾರ, ದೌರ್ಜನ್ಯ, ಅಪಹರಣ, ಧರ್ಮಾಂತರದ ಒತ್ತಡ, ಮತ್ತು ಬ್ಲ್ಯಾಕ್‌ಮೇಲ್ ಸೇರಿದಂತೆ ಹಲವು ಆರೋಪಗಳ ಮೇಲೆ ತನಿಖೆ ನಡೆಸುತ್ತಿದ್ದಾರೆ.