18 September 2025 | Join group

ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು!

  • 17 Sep 2025 09:06:19 PM

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಸಂಪೂರ್ಣ ದಿನ ಎಸ್ಐಟಿ ತಂಡ ತನಿಖೆ ನಡೆಸಿದ್ದು, ಬಹಳಷ್ಟು ಅಸ್ತಿಪಂಜರಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

 

ಈ ನಡುವೆ, ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮತ್ತೊಂದು ಪ್ರಕರಣ ದಾಖಲಾಗಿದೆ. ಕೆಲ ದಿನಗಳ ಹಿಂದೆ ಪೊಲೀಸ್ ಅಧಿಕಾರಿಗಳು ತಿಮರೋಡಿ ಮನೆಯನ್ನು ದಾಳಿ ನಡೆಸಿ ಪರಿಶೀಲಿಸಿದ್ದರು. ಅವರ ಮನೆಯಲ್ಲಿ ಬಂದೂಕು ಮತ್ತು ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು.

 

ಈ ಹಿನ್ನಲೆಯಲ್ಲಿ ಇದೀಗ ತಿಮರೋಡಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ 25(1), 25(1-A), 24(1-B), (A) ಕೇಸ್ ದಾಖಲಾಗಿದೆ. ಎಸ್ಐಟಿ ಎಸ್ಪಿ ಸೈಮನ್ ಅವರ ದೂರು ಆಧರಿಸಿ ಈ ಪ್ರಕರಣ ದಾಖಲು ಮಾಡಲಾಗಿದೆ.