ದುಬೈ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಸಂಭ್ರಮದ ಅಂಗವಾಗಿ ದುಬೈನ ಪ್ರಸಿದ್ಧ ಬರ್ಜ್ ಖಲಿಫಾ ಕಟ್ಟಡವು ವಿಶೇಷ ಲೈಟ್ ಶೋ ಮೂಲಕ ಮಿನುಗಿತು.
ಕಟ್ಟಡದ ಮೇಲ್ಮೈಯಲ್ಲಿ ಮೋದಿ ಅವರ ಚಿತ್ರ ಹಾಗೂ "Happy Birthday" ಸಂದೇಶ ಪ್ರಕಾಶಮಾನವಾಗಿ ತೋರಿಸಲಾಯಿತು. ಈ ವೇಳೆ ಭಾರತೀಯ ತ್ರಿವರ್ಣ ಧ್ವಜದ ಬಣ್ಣಗಳ ಪ್ರದರ್ಶನವೂ ನಡೆಯಿತು.
ಈ ವಿಶೇಷ ಕ್ಷಣ ಭಾರತ-ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳ ನಡುವಿನ ಸ್ನೇಹ ಹಾಗೂ ಸಾಂಸ್ಕೃತಿಕ ಬಾಂಧವ್ಯವನ್ನು ಪ್ರತಿಬಿಂಬಿಸಿದೆ.
ವಿಶೇಷವೆಂದರೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಮಾತ್ರ ಈ ಗೌರವವನ್ನು ಪಡೆದಿದ್ದಾರೆ, ಹುಟ್ಟುಹಬ್ಬ ಮತ್ತು ಭೇಟಿಗಳು ಸೇರಿದಂತೆ ಹಲವು ಸಂದರ್ಭಗಳಲ್ಲಿ ಬುರ್ಜ್ ಖಲೀಫಾ ಅವರ ಚಿತ್ರಗಳಿಂದ ಬೆಳಗಿದೆ. ಬೇರೆ ಯಾವುದೇ ಭಾರತೀಯ ಪ್ರಧಾನಿಗೆ ಈ ರೀತಿಯ ಗೌರವ ಸಿಕ್ಕಿಲ್ಲ.
#WATCH | Dubai's Burj Khalifa illuminated tonight with the images of PM Narendra Modi, on the occasion of his 75th birthday. pic.twitter.com/gamw6cRaoq
— ANI (@ANI) September 17, 2025