ದಕ್ಷಿಣ ಕನ್ನಡ: ಈ ವರ್ಷ ಕರಾವಳಿ ಭಾಗದಲ್ಲಿ ನಿರಂತರ ಸುರಿದ ಭಾರೀ ಮಳೆಯಿಂದ ಅಡಿಕೆ ಬೆಳೆಗಾರರು ಭಾರೀ ಸಂಕಷ್ಟವನ್ನು ಎದುರಿಸಿದ್ದಾರೆ. ಬಿಡದೆ ಸುರಿದ ಮಳೆಯಿಂದಾಗಿ ಅಡಿಕೆ ತೋಟಗಳಿಗೆ ಅಗತ್ಯವಾದ ಮದ್ದು ಸಿಂಪಡನೆ ಸಾಧ್ಯವಾಗದೆ, ಹಲವಾರು ರೈತರು ತೊಂದರೆ ಅನುಭವಿಸಿದ್ದಾರೆ.
ಇದಕ್ಕೂ ಮೀರಿದಂತೆ ಕೊಳೆ ರೋಗದ ಹಾವಳಿಯಿಂದ ಅನೇಕ ತೋಟಗಳಲ್ಲಿ ಅರ್ಧಕ್ಕಿಂತ ಹೆಚ್ಚು ಅಡಿಕೆ ಹಾನಿಗೊಳಗಾಗಿ ರೈತರು ನಿರಾಶೆಗೊಂಡಿದ್ದರು. ಬೆಳೆ ಕಳೆದುಕೊಂಡ ರೈತರಿಗೆ ಈ ವರ್ಷದ ಅಡಿಕೆ ಕೃಷಿ ಕನಸೇ ಕಣ್ಮರೆಯಾದಂತಾಗಿತ್ತು.
ಆದರೆ ಇದೀಗ ಮಾರುಕಟ್ಟೆ ತಜ್ಞರಿಂದ ಬೆಳೆಗಾರರಿಗೆ ಕೊಂಚ ನೆಮ್ಮದಿ ನೀಡುವ ಸುದ್ದಿ ಬಂದಿದೆ. ನವರಾತ್ರಿ ಹಬ್ಬದ ಮುನ್ನ ಹೊಸ ಅಡಿಕೆ ಧಾರಣೆಯಲ್ಲಿ ರೂ. 5ರಿಂದ ರೂ. 10ರವರೆಗೆ ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ಈ ಬೆಳವಣಿಗೆ ಅಡಿಕೆ ಬೆಳೆಗಾರರಿಗೆ ಸಣ್ಣ ಮಟ್ಟಿನಾದರೂ ಧೈರ್ಯ ತುಂಬುವಂತಾಗಿದೆ. ಕಷ್ಟಕರ ಪರಿಸ್ಥಿತಿಯಲ್ಲಿ ಹೋರಾಡುತ್ತಿದ್ದ ರೈತರಿಗೆ ಇದು ಸಿಹಿ ಸುದ್ದಿ ಎಂದೇ ಹೇಳಬಹುದು.