19 June 2026 |

ದುಬೈ ಭೀಕರ ರಸ್ತೆ ಅಪಘಾತ: ಮೃತರ ಕುಟುಂಬಗಳಿಗೆ ₹2.6 ಕೋಟಿ (1 ಮಿಲಿಯನ್ ದಿರ್ಹಮ್ಸ್) ಧನಸಹಾಯ ಘೋಷಿಸಿದ ಉದ್ಯಮಿ ಡಾ. ಶಂಶೀರ್ ವಯಲಿಲ್

  • 18 Jun 2026 12:18:11 AM

ದುಬೈ: ಇಲ್ಲಿನ ಎಮಿರೇಟ್ಸ್ ರಸ್ತೆಯಲ್ಲಿ ಇತ್ತೀಚೆಗೆ (ಜೂನ್ 8) ನಡೆದ ಭೀಕರ ರಸ್ತೆ ಅಪಘಾತದಲ್ಲಿ ತಾಂತ್ರಿಕ ಸೇವಾ ಕಂಪನಿಯೊಂದರ ಏಳು ಮಂದಿ ಉದ್ಯೋಗಿಗಳು ಸಾವನ್ನಪ್ಪಿದ್ದಾರೆ.

 

ಮತ್ತೊಂದು ವಾಹನದ ಅಪಘಾತದಿಂದಾಗಿ ಹೆದ್ದಾರಿಯಲ್ಲೇ ನಿಂತಿದ್ದ ಟ್ರಕ್‌ನ ಹಿಂಭಾಗಕ್ಕೆ, ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಮಿನಿಬಸ್ ವೇಗವಾಗಿ ಡಿಕ್ಕಿ ಹೊಡೆದಿದ್ದರಿಂದ ಈ ಭೀಕರ ದುರಂತ ಸಂಭವಿಸಿದೆ.

 

ಮಾನವೀಯತೆ ಮೆರೆದ ಅನಿವಾಸಿ ಭಾರತೀಯ ಉದ್ಯಮಿ ಈ ದುರಂತದಲ್ಲಿ ತುತ್ತಾದವರ ಕುಟುಂಬಗಳ ನೆರವಿಗೆ ಕೇರಳ ಮೂಲದ ಅಬುಧಾಬಿಯ ಖ್ಯಾತ ಉದ್ಯಮಿ, ಲೋಕೋಪಕಾರಿ ಹಾಗೂ ಬುರ್ಜೀಲ್ ಹೋಲ್ಡಿಂಗ್ಸ್‌ನ ಅಧ್ಯಕ್ಷ ಮತ್ತು ಸಿಇಒ ಆಗಿರುವ ಡಾ. ಶಂಶೀರ್ ವಯಲಿಲ್ ಅವರು ಧಾವಿಸಿದ್ದಾರೆ.

 

ಸಂತ್ರಸ್ತರ ಕುಟುಂಬಗಳಿಗೆ ಒಟ್ಟು 1 ಮಿಲಿಯನ್ ದಿರ್ಹಮ್‌ (ಅಂದಾಜು 2.6 ಕೋಟಿ ರೂಪಾಯಿ) ಧನಸಹಾಯ ಮಾಡುವುದಾಗಿ ಅವರು ಘೋಷಿಸಿದ್ದಾರೆ.

 

ಆರ್ಥಿಕ ಸಹಾಯದ ವಿವರಗಳು:

ಮೃತರ ಕುಟುಂಬಗಳಿಗೆ: ಅಪಘಾತದಲ್ಲಿ ಮೃತಪಟ್ಟ ಏಳು ಜನರ ಕುಟುಂಬಗಳಿಗೆ ತಲಾ ತಲಾ ₹26 ಲಕ್ಷ (100,000 ದಿರ್ಹಮ್‌) ನೀಡಲಾಗುತ್ತದೆ.

 

ಗಾಯಾಳುಗಳ ಚಿಕಿತ್ಸೆಗೆ: ಗಾಯಗೊಂಡಿರುವ ಒಂಬತ್ತು ಜನ ಬದುಕುಳಿದವರ ವೈದ್ಯಕೀಯ ಮತ್ತು ಚೇತರಿಕೆಯ ಅಗತ್ಯಗಳಿಗಾಗಿ ಒಟ್ಟು ₹46.8 ಲಕ್ಷ (180,000 ದಿರ್ಹಮ್‌) ನಿಗದಿಪಡಿಸಲಾಗಿದೆ.

 

ಪ್ರಯಾಣ ಹಾಗೂ ವಸತಿ ವೆಚ್ಚ: ಸಂತ್ರಸ್ತರ ಕುಟುಂಬ ಸದಸ್ಯರ ತುರ್ತು ಪ್ರಯಾಣ ಮತ್ತು ವಸತಿ ಸೌಕರ್ಯಕ್ಕಾಗಿ ₹18.2 ಲಕ್ಷ (70,000 ದಿರ್ಹಮ್‌) ಮೀಸಲಿಡಲಾಗಿದೆ.

 

ಮಕ್ಕಳ ಶಿಕ್ಷಣಕ್ಕೆ: ದುರಂತಕ್ಕೀಡಾದ ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ₹13 ಲಕ್ಷ (50,000 ದಿರ್ಹಮ್‌)ಗಳ ಪ್ಯಾಕೇಜ್ ಅನ್ನು ಘೋಷಿಸಲಾಗಿದೆ.

 

ಡಾ. ಶಂಶೀರ್ ವಯಲಿಲ್ ರವರು ಮಾಡುವ ಈ ಅತೀ ದೊಡ್ಡ ಮೊತ್ತದ ಹಣದ ನೆರವು ಮತ್ತು ಮಾನವೀತೆಯನ್ನು ಯುಎಇ ಸರಕಾರ ಮತ್ತು ಜನತೆ ಪ್ರಶಂಸಿದ್ದಾರೆ. ಈ ಹಿಂದೆಯೂ ಇವರು ಹಲವಾರು ಬಾರಿ ನಿರ್ಗತಿಕರಿಗೆ ಸಹಾಯ ಮಾಡಿರುವ ಬಗ್ಗೆ ವರದಿಯಾಗಿತ್ತು