ಕಡೇಶಿವಾಲಯ: ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ, ಕಡೇಶಿವಾಲಯದಲ್ಲಿ ದಿನಾಂಕ 30-12-2025ನೇ ಶುಕ್ರವಾರ ಸಂಜೆ ಗಂಟೆ 6.00ಕ್ಕೆ ಅಷ್ಟ ಮಂಗಳ ಚಿಂತನೆಯಲ್ಲಿ ಕಂಡು ಬಂದಂತೆ ನಾಲ್ಕು ದುರ್ಗಾ ಪೂಜೆ ಯಲ್ಲಿ ಕೊನೆಯ ದುರ್ಗಾ ಪೂಜೆ ಜರಗಿತು.
ಪೂಜಾ ವಿಧಿ ವಿಧಾನ ಗಳನ್ನು ಕ್ಷೇತ್ರದ ಅರ್ಚಕರಾದ ಹರಿಪ್ರಸಾದ್ ಭಟ್ ನೆರವೇರಿಸಿದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಡಿ. ಸಂಜೀವ ಪೂಜಾರಿ, ಸತೀಶಚಂದ್ರ ಶೆಟ್ಟಿ ಭಾವ ಗುತ್ತು, ಶೀನ ನಾಯ್ಕ್ ನೆಕ್ಕಿಲಾಡಿ, ದೊಡ್ಡ ರಂಗ ಪೂಜಾ ಸೇವಾ ಸಮಿತಿಯ ಅಧ್ಯಕ್ಷರಾದ ಕೂಸಪ್ಪ ಪೂಜಾರಿ, ಪ್ರಮುಖರಾದ ಕೆ ಕೆ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪಕ ದೇವರಾಜ್ ಮುಂಗೂರು, ಮತ್ತಿತರು ಉಪಸ್ಥಿತರಿದ್ದರು.





