04 March 2026 | Join group

ಕಡೇಶಿವಾಲಯ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಜೀರ್ಣೋದ್ದಾರ ಹಾಗೂ ವಾರ್ಷಿಕ ಜಾತ್ರೆ ಉತ್ಸವದ ಪೂರ್ವಭಾವಿ ಸಭೆ

  • 03 Mar 2026 12:39:04 PM

ಕಡೇಶಿವಾಲಯ: ಮಹಾತೋಬಾರ ಚಿಂತಾಮಣಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ, ಕಡೇಶಿವಾಲಯ, ಇಲ್ಲಿ ದಿನಾಂಕ 01-03-2026ನೇ ರವಿವಾರ ಜೀರ್ಣೋದ್ದಾರ ಸಮಿತಿ, ವ್ಯವಸ್ಥಾಪನಾ ಸಮಿತಿ ಹಾಗೂ ಭಕ್ತಾದಿಗಳ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಶ್ರೀ ಕುಸುಮೋಧರ ಡಿ ಶೆಟ್ಟಿ ನಡುಮೊಗೇರು ಗುತ್ತು ಇವರು ವಹಿಸಿದ್ದರು. ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿ "ಭಕ್ತಾದಿಗಳು ಹಾಗೂ ಕ್ಷೇತ್ರದ ಅರ್ಚಕ ವೃoದ ಜೊತೆಯಾಗಿ ದೇವರ ಸೇವೆ ಎಂದು ತಿಳಿದು ಕೆಲಸ ಮಾಡಿದರೆ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ಒಂದು ವರ್ಷದಲ್ಲಿ ಪೂರ್ಣಗೊಳ್ಳುತದೆ ಎಂದು ನಾನು ಭಾವಿಸುತ್ತೇನೆ"ಎಂದರು.

 

ಮುಖ್ಯ ಅತಿಥಿಗಳಾಗಿ ಶ್ರೀ ಪರಮ ಪೂಜ್ಯ ಶ್ರೀ ಮೋಹನ ದಾಸ ಸ್ವಾಮಿಜಿ ಶ್ರೀ ದಾಮ ಮಾಣಿಲ ಇವರು ಮಾತನಾಡಿ " ನಾವೆಲ್ಲರೂ ಒಂದಾಗಿ ಭಕ್ತಿಯಿಂದ ಜೀರ್ಣೋದ್ದಾರ ಕಾರ್ಯದಲ್ಲಿ ಪಾಲ್ಗೊಳ್ಳೋಣ, ದೇವರ ಸಾನಿದ್ಯ ಪಾವಿತ್ರಗೊಳ್ಳಲಿ" ಎಂದು ತಿಳಿಸಿ ಪ್ರಪ್ರಥಮ ನಿಧಿ ಸಂಗ್ರಹಣೆಗೆ ಚಾಲನೆ ನೀಡಿದರು.

 

ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿಯ ಸದಸ್ಯರಾದ ಅಮರನಾಥ ಅಜಿಲರು ಆರಿಕಲ್ಲು ಗುತ್ತು, ಸುರೇಶ ರಾಜೀವ ಶೆಟ್ಟಿ ನಡುಮೊಗೇರು ಗುತ್ತು, ಮೋಹನ ದಾಸ್ ರೈ, ಮೋಹನ್ ರೈ, ದಯಾನಂದ ಶೆಟ್ಟಿ, ಕೂಸಪ್ಪ ಪೂಜಾರಿ ಪುನೀಕೇದಡಿ ಹಾಗೂ ಗೌರವ ಸಲಹೆಗರರಾದ ಶ್ರೀ ಶಂಕರ ಭಟ್ ಕಂಪದ ಕೊಡಿ, ಪ್ರಹ್ಲಾದ ಶೆಟ್ಟಿ ಜಡ್ತಿಲ, ಸುಂದರ ರೈ ಕುರುoಬಲಾಜೆ, ಗಂಗಾಧರ ಶೇರಾ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಈಶ್ವರ ಪೂಜಾರಿ ಹಿರ್ತಡ್ಕ, ಸತೀಶ್ಚಂದ್ರ ಶೆಟ್ಟಿ ಬಾವಗುತ್ತು, ಚಿದಾನಂದ ಪೂಜಾರಿ ಕಡೇಶಿವಾಲಯ, ಸಂಜೀವ ಪೂಜಾರಿ ದಾಸಕೋಡಿ, ಶೀನ ನಾಯ್ಕ ನೆಕ್ಕಿಲಾಡಿ, ಪ್ರೇಮ ಶಿವಪ್ರಸಾದ್ ಶೆಟ್ಟಿ ಮಿತ್ತಿಮಾರು, ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸತೀಶ್ಚಂದ್ರ ಶೆಟ್ಟಿ ಬಾವಗುತ್ತು ಸ್ವಾಗತಿಸಿ, ಶೀನ ನಾಯ್ಕ ನೆಕ್ಕಿಲಾಡಿ ವಂದಿಸಿದರು.

A PHP Error was encountered

Severity: Core Warning

Message: PHP Startup: Unable to load dynamic library 'i360.so' (tried: /usr/local/php74/lib/php/extensions/no-debug-non-zts-20190902/i360.so (libatomic.so.1: cannot open shared object file: No such file or directory), /usr/local/php74/lib/php/extensions/no-debug-non-zts-20190902/i360.so.so (/usr/local/php74/lib/php/extensions/no-debug-non-zts-20190902/i360.so.so: cannot open shared object file: No such file or directory))

Filename: Unknown

Line Number: 0

Backtrace: