ವಿಟ್ಲ: ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನ, ಮಾಣಿಲ-ಕುಕ್ಕಾಜೆ ಕ್ಷೇತ್ರದಲ್ಲಿ ಶ್ರೀಕೃಷ್ಣ ಗುರೂಜಿಯವರು ವರ್ಷಂಪ್ರತಿಯಂತೆ ನೂರಾರು ಶಾಲಾ ಮಕ್ಕಳಿಗೆ ಉಚಿತ ಪುಸ್ತಕಗಳನ್ನು ವಿತರಿಸಿ ಶಿಕ್ಷಣ ಪ್ರೋತ್ಸಾಹದ ಕಾರ್ಯಕ್ಕೆ ಮತ್ತೊಮ್ಮೆ ಸಾಕ್ಷಿಯಾದರು.
ಕಾರ್ಯಕ್ರಮದಲ್ಲಿ ಕ್ಷೇತ್ರದ ಮೊಕ್ತೇಸರರಾದ ಎಂ.ಕೆ. ಕುಕ್ಕಾಜೆ, ಶ್ರೀಧರ ಬಾಳೆಕಲ್ಲು, ಕಾಳಿಕಾ ಕಲಾ ಸಂಘ (ರಿ.) ಕುಕ್ಕಾಜೆ ಅಧ್ಯಕ್ಷ ನವೀನ್ ತಾರಿದಳ, ಲಿಂಗಪ್ಪ ಗೌಡ (ಪಶುವೈದ್ಯರು, ಉಪ್ಪಿನಂಗಡಿ), ಸತೀಶ್ (ಜೆಇ, ಕನ್ಯಾನ ವಿಭಾಗ), ಸುಂದರ ಪಳನೀರು, ಸುಧಾ ಸಂದೇಶ್ (ಮುಖ್ಯೋಪಾಧ್ಯಾಯರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಮಜಲು), ದಯಾಮಣಿ (ಮುಖ್ಯೋಪಾಧ್ಯಾಯರು, ವೇಣುಗೋಪಾಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಕಳಕುಂಜ) ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಭಕ್ತಾದಿಗಳು.
ಪುಸ್ತಕ ವಿತರಣಾ ಕಾರ್ಯಕ್ರಮದ ಗುರೂಜಿಯವರ ಆಪ್ತರಾದ ಪುರುಷೋತ್ತಮ ಕಾರಾಜೆ ಸಹಕರಿಸಿದರು.






