27 July 2026 |

ವಿಟ್ಲದಲ್ಲಿ 'ದಕ್ಷಿಣ ಕನ್ನಡ ನೃತ್ಯ ಕಲಾವಿದರ ಒಕ್ಕೂಟ'ದ ವಾರ್ಷಿಕ ಸಂಭ್ರಮ, ಕ್ರೀಡಾಕೂಟ ಹಾಗೂ ಪದಗ್ರಹಣ ಸಮಾರಂಭ

  • 26 Jul 2026 04:28:29 PM

ವಿಟ್ಲ: ನೃತ್ಯ ಕಲಾವಿದರ ಒಕ್ಕೂಟ (ರಿ.), ದಕ್ಷಿಣ ಕನ್ನಡ ಇದರ 2026-27ನೇ ಸಾಲಿನ ವಾರ್ಷಿಕ ಸಂಭ್ರಮ, ಕ್ರೀಡಾಕೂಟ ಹಾಗೂ ಪದಗ್ರಹಣ ಸಮಾರಂಭವು ಆಗಸ್ಟ್ 2ರಂದು (ಭಾನುವಾರ) ವಿಟ್ಲದ ವಿಠ್ಠಲ್ ಜೆಸೀಸ್ ಆಂಗ್ಲ ಮಾಧ್ಯಮ ಶಾಲೆಯ 'ಜೆಸೀಸ್ ಪೇವಿಲಿಯನ್ ಹಾಲ್' ನಲ್ಲಿ ನಡೆಯಲಿದೆ.

 

ಕಾರ್ಯಕ್ರಮವು ಬೆಳಿಗ್ಗೆ 9.00 ಗಂಟೆಗೆ ಉದ್ಘಾಟನೆಗೊಳ್ಳಲಿದ್ದು, ದಿನವಿಡೀ ವಿವಿಧ ಕ್ರೀಡಾ ಸ್ಪರ್ಧೆಗಳು ಹಾಗೂ ಸಂಘದ ಕಾರ್ಯಕ್ರಮಗಳು ನಡೆಯಲಿವೆ.

 

ಸಂಜೆ 2.30 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ನೃತ್ಯ ಕಲಾವಿದರು ಹಾಗೂ ಗೊಂಬೆ ಕಲಾವಿದರಿಗಾಗಿ ಉಚಿತ ಜೀವ ವಿಮೆ ಯೋಜನೆಗೆ ಚಾಲನೆ ನೀಡಲಾಗುವುದು.

 

ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ನೃತ್ಯ ಹಾಗೂ ಗೊಂಬೆ ಕಲಾವಿದರು, ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ನೃತ್ಯ ಕಲಾವಿದರ ಒಕ್ಕೂಟ (ರಿ.), ದಕ್ಷಿಣ ಕನ್ನಡ ಇದರ ಅಧ್ಯಕ್ಷರು ಹಾಗೂ ಸದಸ್ಯರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.