13 September 2026 |

ಆರಿಕಲ್ಲು ಮೂಂಕಮುಗೇರಿನಲ್ಲಿ 'ಗೌಜಿ ಫ್ರೆಂಡ್ಸ್‌' ವತಿಯಿಂದ ಎರಡನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಟೋಟ ಸ್ಪರ್ಧೆ; ಬಹುಮಾನ ವಿತರಣೆ

  • 12 Sep 2026 06:01:48 PM

ಕಡೇಶಿವಾಲಯ: ಗೌಜಿ ಫ್ರೆಂಡ್ಸ್ ಆರಿಕಲ್ಲು ಮೂಂಕಮುಗೇರು ಕಡೇಶಿವಾಲಯ ಇದರ ಸಹಭಾಗಿತ್ವದಲ್ಲಿ ಎರಡನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಪ್ರಯುಕ್ತ ಆಟೋಟ ಸ್ಪರ್ಧೆಗಳು ದಿನಾಂಕ-06-09-2026 ಆದಿತ್ಯವಾರದಂದು ಆರಿಕಲ್ಲು ಮೂಂಕಮುಗೇರು ಇಲ್ಲಿ ನಿಕಟಪೂರ್ವ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಹರಿಶ್ಚಂದ್ರ ಭಂಡಾರಿ ಕಾಡಬೆಟ್ಟು ಇವರು ದೀಪ ಬೆಳಗಿಸುವುದರೊಂದಿಗೆ ಕ್ರೀಡಾ ಮೈದಾನದಲ್ಲಿ ನಡೆಯಿತು.

ಉದ್ಘಾಟನಾ ಸಮಾರಂಭದಲ್ಲಿ ಶ್ರೀಮತಿ ಗೋಪಿ ಪಡ್ಡಂಗೆ, ಶ್ರೀಮತಿ ಲಲಿತಾ ಪಡ್ಡಂಗೆ, ಶ್ರೀಮತಿ ಯಶೋದಾ ಮೂಂಕಮುಗೇರು, ಶ್ರೀಮತಿ ಅಪ್ಪಿ ಕಲ್ಕೋಟೆ, ಶ್ರೀ ಗಿರಿಯಪ್ಪ ಪೂಜಾರಿ ಮೂಂಕಮುಗೇರು ಉಪಸ್ಥಿತರಿದ್ದರು.

ಸಂಜೆ ನಡೆದ ಕ್ರೀಡೆಯ ಬಹುಮಾನ ವಿತರಣೆಯ ಸಮಾರೋಪ ಸಮಾರಂಭದಲ್ಲಿ ಸುಧಾನ ಶಾಲೆಯ ಚಿತ್ರಕಲಾ ಶಿಕ್ಷಕರಾದ ಶ್ರೀ ಶಿವಗಿರಿ ಕಲ್ಲಡ್ಕ,ಮಹಮ್ಮಾಯಿ ಶಾಮಿಯಾನ ಮತ್ತು ಕ್ಯಾಟರಿಂಗ್ ಇದರ ಮಾಲಕರಾದ ಶ್ರೀ ರವಿ ನಾಯ್ಕ್ ಮುಚ್ಚಿಲ, ಚಿಗುರು ಡಿಜಿಟಲ್ಸ್ ಇದರ ಮುಖ್ಯಸ್ಥರಾದ ಶ್ರೀ ದಿವಾಕರ್ ಎಂ., ಸಿವಿಲ್ ಇಂಜಿನಿಯರ್ ಶ್ರೀ ದೇವಿಪ್ರಸಾದ್ ಶೆಟ್ಟಿ ಬೆಂಗದಡಿ, ಶ್ರೀ ದುರ್ಗಾ ಇಲೆಕ್ಟ್ರಿಕಲ್ಸ್ ಪೆರ್ನೆ ಇದರ ಮಾಲಕರಾದ ಶ್ರೀ ಉಮೇಶ್ ಪೂಜಾರಿ ದಾಳಿಂಬ, ವಕೀಲರಾದ ಶ್ರೀ ಗುರುರಾಜ್ ಕುಂಟೋನಿ, ಸಮಾಜ ಸೇವಕರಾದ ಶ್ರೀಮತಿ ಚಿತ್ರಾ ಅರುಣ್ ಕೊಚ್ಚಿ ಎರ್ನಾಕುಲಂ ಭಾಗವಹಿಸಿದ್ದರು.

ಸಭಾ ಕಾರ್ಯಕ್ರಮದಲ್ಲಿ ಕು. ಅಶ್ವಿತಾ ಶ್ರೀ ದರ್ಶನ್ ನಾಯ್ಕ್ ಸರೋಳಿದಡಿ ಸ್ವಾಗತಿಸಿ, ಕು. ವರ್ಷಿತಾ ಶ್ರೀಮತಿ ಸ್ವಾತಿ ದಿವಾಕರ್ ಧನ್ಯವಾದ ಸಮರ್ಪಿಸಿದರು.

 

ಕ್ರೀಡಾ ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀ ಸುಧೀರ್ ಪೂಜಾರಿ ಕೆಮ್ಮಾನು, ಭಾಸ್ಕರ್ ನಾಯ್ಕ್ ಮುಚ್ಚಿಲ ಮತ್ತು ವಸಂತ ದೇವಾಡಿಗ ಕೋಡಿ ನಿರ್ವಹಿಸಿ, ಕಾರ್ಯಕ್ರಮದ ಸಂಪೂರ್ಣ ನಿರೂಪಣೆಯನ್ನು ಶ್ರೀ ಯೋಗೀಶ್ ನಾಯ್ಕ್ ದಾಳಿಂಬ ಇವರು ನಿರೂಪಿಸಿದರು.