ಬಂಟ್ವಾಳ, ಕಡೇಶಿವಾಲಯ: ರೋಟರಿ ಸಮುದಾಯ ದಳ ಕಡೇಶಿವಾಲಯ, ಪೆರ್ಲಾಪುವಿನ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಆ.15ರಂದು ಗ್ರಾಮೀಣ ರೋಟರಿ ಭವನ ಪೆರ್ಲಾಪುವಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಜಯಂತಿ ಕಿಟ್ಟಣ್ಣ ಶೆಟ್ಟಿ, ಕುರುಂಬ್ಲಾಜೆ ಅವರು ಧ್ವಜಾರೋಹಣ ನೆರವೇರಿಸಿದರು. ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ರೋಟೇರಿಯನ್ ಪಿಎಚ್‌ಎಫ್ ರವಿ ಚಂದ್ರ ಬಂಟ್ವಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್‌ನ ಕಾರ್ಯದರ್ಶಿ ರವಿರಾಜ್ ಶೆಟ್ಟಿ ಹಾಗೂ ಬಾಲಕೃಷ್ಣ ನಾಯ್ಕ್ ಮರೋಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನೂತನ ಪದಾಧಿಕಾರಿಗಳ ಆಯ್ಕೆ
2026-27ನೇ ಸಾಲಿನ ರೋಟರಿ ಸಮುದಾಯ ದಳ ಕಡೇಶಿವಾಲಯದ ನೂತನ ಅಧ್ಯಕ್ಷರಾಗಿ ವಾಸು ಪೂಜಾರಿ ಪ್ರತಾಪನಗರ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಚಂದಪ್ಪ ನಾಯ್ಕ್ ದೆಂತಡ್ಕ, ಕಾರ್ಯದರ್ಶಿಯಾಗಿ ಚಂದ್ರೋದಯ ಕುಲಾಲ್ ಗಾಣದಕೊಟ್ಯ, ಜತೆ ಕಾರ್ಯದರ್ಶಿಯಾಗಿ ಸಂಜೀವ ಪೂಜಾರಿ ದಾಸಕೋಡಿ ಹಾಗೂ ಕೋಶಾಧಿಕಾರಿಯಾಗಿ ಪ್ರದೀಪ್ ಕುಮಾರ್ ಎಂ.ವಿ. ಆಯ್ಕೆಯಾಗಿದ್ದಾರೆ. ಕ್ರೀಡಾ ಕಾರ್ಯದರ್ಶಿಯಾಗಿ ಪೂವಪ್ಪ ನಾಯ್ಕ್ ಪಿಲಿಂಗಳ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ನಾಗೇಶ್ ಗುತ್ತಿಗೆ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಸಂಘ ಸೇವೆಗೆ ರಝಕ್ ಪ್ರತಾಪನಗರ, ಆಡಳಿತ ಸೇವೆಗೆ ಸತೀಶಚಂದ್ರ ಶೆಟ್ಟಿ ಬಾವಾಗುತ್ತು, ವೃತ್ತಿ ಸೇವೆಗೆ ಕು. ಸಿಂಧು ಹಾಗೂ ಅರ್ಥ ವ್ಯವಸ್ಥೆಗೆ ಶ್ರೀಮತಿ ದಯಾಶ್ರೀ ಕುಂಡಾಜೆ ಆಯ್ಕೆಯಾಗಿದ್ದಾರೆ. ರತ್ನಾಕರ ನಾಯ್ಕ್ ಪ್ರತಾಪನಗರ ಅವರು ನಿಕಟಪೂರ್ವ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಡೇಶಿವಾಲಯ ಗ್ರಾಮದ ಪ್ರೌಢಶಾಲೆ, ಪ್ರಾಥಮಿಕ ಶಾಲೆ, ಎಲ್ಲಾ ಅಂಗನವಾಡಿ ಕೇಂದ್ರಗಳು ಹಾಗೂ ಮದರಸಾಗಳ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು. ಅಲ್ಲದೆ, ಚಿನ್ನಯಕಟ್ಟೆ ಅಂಗನವಾಡಿ ಕೇಂದ್ರದ ಬೇಡಿಕೆಯ ಮೇರೆಗೆ 500 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್‌ನ್ನು ಹಸ್ತಾಂತರಿಸಲಾಯಿತು.
ರೋಟರಿ ಸಮುದಾಯ ದಳದ ಸಲಹಾ ಸಮಿತಿ ಅಧ್ಯಕ್ಷ ಕೆ.ಕೆ. ಶೆಟ್ಟಿ ಕುರುಂಬ್ಲಾಜೆ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಡಿ. ಸಂಜೀವ ಪೂಜಾರಿ ದಾಸಕೋಡಿ ವಂದಿಸಿದರು. ಸದಸ್ಯ ಯೋಗೀಶ್ ದಾಳಿಂಬ ಕಾರ್ಯಕ್ರಮ ನಿರ್ವಹಿಸಿದರು.





