17 August 2026 |

ಕಡೇಶಿವಾಲಯ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ: ಮಣಿನಾಲ್ಕೂರು ಗ್ರಾಮದ 3ನೇ, 4ನೇ ವಾರ್ಡಿನ ಭಕ್ತಾದಿಗಳ ಸಭೆ

  • 16 Aug 2026 04:41:51 PM

ಬಂಟ್ವಾಳ, ಕಡೇಶಿವಾಲಯ: ಮಹಾತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರದ ನಿಮಿತ್ತ ಮಣಿನಾಲ್ಕೂರು ಗ್ರಾಮದ 3ನೇ ಹಾಗೂ 4ನೇ ವಾರ್ಡಿನ ಭಕ್ತಾದಿಗಳ ಸಭೆಯನ್ನು ಆಗಸ್ಟ್ 16, 2026ರಂದು ಬೆಳಿಗ್ಗೆ 10.30ಕ್ಕೆ ಮುಗೇರು ಶ್ರೀ ಕೊಡಮಣಿತ್ತಾಯ, ಸಾರಾಳ ಪಂಜುರ್ಲಿ ಧರ್ಮಚಾವಡಿಯಲ್ಲಿ ಆಯೋಜಿಸಲಾಗಿತ್ತು.

 

ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಆರ್ಥಿಕ ಹಾಗೂ ಗ್ರಾಮವಾರು ಸಮಿತಿಯನ್ನು ರಚಿಸುವ ಉದ್ದೇಶದಿಂದ ಈ ಸಭೆಯನ್ನು ಕರೆಯಲಾಗಿತ್ತು.

 

ಸಭೆಯ ಅಧ್ಯಕ್ಷತೆಯನ್ನು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಕುಸುಮೋಧರ ಡಿ. ಶೆಟ್ಟಿ ವಹಿಸಿದ್ದರು.

 

ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಡಾ. ಶ್ರೀಪತಿ ರಾವ್ ದಾಳಿಂಬ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಶೆಟ್ಟಿ ನುಳಿಯಾಲು, ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ಶ್ರೀ ಅಮರನಾಥ್ ಅಜಿಲ ಆರಿಕಲ್ಲು, ಶ್ರೀ ಸುರೇಶ್ ರಾಜೀವ್ ಶೆಟ್ಟಿ ನಡುಮೊಗರು, ಶ್ರೀ ದಯಾನಂದ ಶೆಟ್ಟಿ, ಶ್ರೀ ಸತೀಶ್ಚಂದ್ರ ಶೆಟ್ಟಿ ಬಾವಾಗುತ್ತು, ಶ್ರೀ ಈಶ್ವರ ಪೂಜಾರಿ ಹಿರ್ತಡ್ಕ, ಶ್ರೀ ಚಿದಾನಂದ ಕಡೇಶಿವಾಲಯ, ಆರ್ಥಿಕ ಸಮಿತಿಯ ಸಂಚಾಲಕರಾದ ಶ್ರೀ ಹರಿಶ್ಚಂದ್ರ ಕಾಡಬೆಟ್ಟು, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ತಿರುಮಲೇಶ್ವರ ಭಟ್ ಸೇರಿದಂತೆ ಗ್ರಾಮದ ಗಣ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

 

ಶ್ರೀ ಪುರುಷೋತ್ತಮ ಪೂಜಾರಿ ಮಜಲು ಅವರು ಸ್ವಾಗತಿಸಿದರು. ಶ್ರೀ ಸತೀಶ್ಚಂದ್ರ ಶೆಟ್ಟಿ ಬಾವಾಗುತ್ತು ಅವರು ವಂದಿಸಿದರು.

 

ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶ್ರೀ ಶೀನ ನಾಯ್ಕ್ ನೆಕ್ಕಿಲಾಡಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.