ಬಂಟ್ವಾಳ, ಕಡೇಶ್ವಾಲ್ಯ: ಮಹಾತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಮಣಿನಾಲ್ಕೂರು ಗ್ರಾಮದ 1ನೇ ಹಾಗೂ 2ನೇ ವಾರ್ಡ್‌ಗಳ ಆರ್ಥಿಕ ಬೈಲುವಾರು ಸಮಿತಿ ರಚಿಸುವ ಉದ್ದೇಶದಿಂದ ಭಕ್ತಾದಿಗಳ ಸಭೆಯನ್ನು ಆಗಸ್ಟ್ 16ರಂದು ಅಪರಾಹ್ನ 4 ಗಂಟೆಗೆ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ನಡೆಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಕಡೇಶ್ವಾಲ್ಯ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕುಸುಮಾಧರ ಡಿ. ಶೆಟ್ಟಿ ನಡುಮೊಗರುಗುತ್ತು ಅವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ ನುಳಿಯಾಲು, ಕರ್ನಾಟಕ ಸರ್ಕಾರದ ಬೀಜ ನಿಗಮದ ಅಧ್ಯಕ್ಷೆ ಲಾವಣ್ಯ ಬಲ್ಲಾಳ್, ತಂತ್ರಿಗಳಾದ ವಿಜಯಕೃಷ್ಣ ಐತಾಳ್ ಸರಪ್ಪಾಡಿ, ಶ್ರೀ ಶರಬೇಶ್ವರ ದೇವಸ್ಥಾನದ ಅರ್ಚಕರಾದ ಶಂಕರನಾರಾಯಣ ಹೊಳ್ಳ, ಇಳಿಯೂರು ದೇವಸ್ಥಾನದ ಅರ್ಚಕರಾದ ಸುಧೀರ್ ಕುಮಾರ್ ಭಟ್, ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ಅರಿಕಲ್ಲು ಗುತ್ತು ಮನೆಯ ಯಜಮಾನ ಅಮರನಾಥ ಅಜಿಲರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ದಯಾನಂದ ಶೆಟ್ಟಿ ನದ್ಯೇಲು, ಈಶ್ವರ ಪೂಜಾರಿ ಹಿರ್ತಡ್ಕ, ಸತೀಶಚಂದ್ರ ಶೆಟ್ಟಿ ಬಾವಗುತ್ತು ಸೇರಿದಂತೆ ಮಣಿನಾಲ್ಕೂರು ಗ್ರಾಮದ ಗಣ್ಯರು ಹಾಗೂ ಭಕ್ತಾದಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಸಂಪತ್ ಕುಮಾರ್ ಶೆಟ್ಟಿ ಮುಂಡ್ರೆಲ್‌ಗುತ್ತು ಅವರು ಸ್ವಾಗತಿಸಿದರು. ಸತೀಶಚಂದ್ರ ಶೆಟ್ಟಿ ಬಾವಗುತ್ತು ಅವರು ವಂದಿಸಿದರು. ನವೋದಯ ಸ್ವಸಹಾಯ ಸಂಘಗಳ ಮಣಿನಾಲ್ಕೂರು ವಲಯ ಪ್ರೇರಕರಾದ ಶ್ರೀ ಶೀನ ನಾಯ್ಕ್ ನೆಕ್ಕಿಲಾಡಿ ಅವರು ಕಾರ್ಯಕ್ರಮ ನಿರೂಪಿಸಿದರು.





