16 September 2026 |

ಕಲ್ಲಡ್ಕ ಗಣೇಶೋತ್ಸವ ಶೋಭಾಯಾತ್ರೆಯಲ್ಲಿ 108 ಭಜನಾ ತಂಡಗಳ ಮಕ್ಕಳ ಭಕ್ತಿಯ ಹೆಜ್ಜೆ

  • 15 Sep 2026 06:00:38 PM

ಕಲ್ಲಡ್ಕ: ಶ್ರೀರಾಮ ಮಂದಿರದಲ್ಲಿ ನಡೆದ 51ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಆಯೋಜಿಸಿದ್ದ ಶೋಭಾಯಾತ್ರೆ ಭಕ್ತಿಭಾವದೊಂದಿಗೆ ನಡೆಯಿತು. ಶೋಭಾಯಾತ್ರೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ 108 ಭಜನಾ ತಂಡಗಳ ಮಕ್ಕಳು ಭಾಗವಹಿಸಿ ಕುಣಿತ ಭಜನೆ ಮೂಲಕ ಗಮನ ಸೆಳೆದರು.

 

ಭಜನೆಯ ತಾಳಕ್ಕೆ ಹೆಜ್ಜೆ ಹಾಕಿದ ಮಕ್ಕಳು ಶೋಭಾಯಾತ್ರೆಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು. ಮಕ್ಕಳ ಉತ್ಸಾಹಭರಿತ ಹಾಗೂ ಶಿಸ್ತುಬದ್ಧ ಕುಣಿತ ಭಜನೆ ಸಾರ್ವಜನಿಕರ ಗಮನ ಸೆಳೆಯಿತು.

 

ಗಣೇಶೋತ್ಸವದ ಶೋಭಾಯಾತ್ರೆಯಲ್ಲಿ 108 ಭಜನಾ ತಂಡಗಳ ಮಕ್ಕಳ ಪಾಲ್ಗೊಳ್ಳುವಿಕೆ ವಿಶೇಷ ಆಕರ್ಷಣೆಯಾಗಿದ್ದು, ಭಕ್ತರು ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.