16 June 2026 |

ಕಲ್ಲಡ್ಕದಲ್ಲಿ ಶ್ರೀರಾಮ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ನೂತನ ಭವನ 'ವಿಕ್ರಮಾದಿತ್ಯ' ಲೋಕಾರ್ಪಣೆ

  • 10 Jun 2025 12:36:53 AM

ಬಂಟ್ವಾಳ, ಕಲ್ಲಡ್ಕ: ಕರ್ನಾಟಕ ರಾಜ್ಯದ ಪ್ರಮುಖ ವಿದ್ಯಾ ಸಂಸ್ಥೆಗಳಲ್ಲಿ ಒಂದೊಂದ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಹನುಮಾನ್ ನಗರದಲ್ಲಿರುವ ಶ್ರೀರಾಮ ವಿದ್ಯಾಕೇಂದ್ರ ಇದೀಗ ಇಂಗ್ಲಿಷ್ ಮಾಧ್ಯಮವನ್ನು ಆರಂಭಿಸಿದೆ.

 

ಇದರ ಪ್ರಯುಕ್ತ, ಹೊಸದಾಗಿ ನಿರ್ಮಿಸಿದ ಶ್ರೀರಾಮ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ನೂತನ ಭವನ 'ವಿಕ್ರಮಾದಿತ್ಯ' ದ ಲೋಕಾರ್ಪಣೆ ಇದೇ ಬರುವ ದಿನಾಂಕ 12 ಜೂನ್ 2025, ಗುರುವಾರ ನಡೆಯಲಿದೆ.

 

ಈ ಭವನದ ಉದ್ಘಾಟನೆಯು ಸದ್ಗುರು ಶ್ರೀ ಮಧುಸೂದನ ಸಾಯಿ (ಮಾನವೀಯ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶಕರು ಮತ್ತು ಕುಲಾಧಿಪತಿಗಳು, ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ, ಕಲಬುರುಗಿ) ಇವರ ದಿವ್ಯ ಹಸ್ತದಲ್ಲಿ ಪೂರ್ವಾಹ್ನ 10 ಗಂಟೆಗೆ ನಡೆಯಲಿದ್ದು, ಸಭಾ ಕಾರ್ಯಕ್ರಮವು ಶ್ರೀರಾಮಾಂಗಣ, ಶ್ರೀರಾಮ ಮಂದಿರ ಕಲ್ಲಡ್ಕದಲ್ಲಿ ಪೂರ್ವಾಹ್ನ 11.00 ಗಂಟೆಗೆ ನೆರವೇರಲಿದೆ.

 

ಈ ಸಭಾ ಕಾರ್ಯಕ್ರಮದ ಅಧ್ಯಕ್ಷರಾಗಿ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮತ್ತು ಅಭ್ಯಾಗತರಾಗಿ ಶ್ರೀ ಅಶೋಕ ಖೇಣಿ, ಮಾಜಿ ಶಾಸಕರು ಹಾಗೂ ಉದ್ಯಮಿಗಳು ಮತ್ತು ಶ್ರೀ ಶಶಿಧರ ಶೆಟ್ಟಿ, ಬರೋಡಾ, ಉದ್ಯಮಿಗಳು ಭಾಗವಹಿಸಲಿದ್ದಾರೆ.

 

ಈ ಎಲ್ಲಾ ಕಾರ್ಯಕ್ರಮಕ್ಕೆ ಎಲ್ಲರಿಗೂ ಆತ್ಮೀಯವಾಗಿ ಸ್ವಾಗತಿಸುತ್ತಿದ್ದಾರೆ, ಶ್ರೀ ಬಿ. ನಾರಾಯಣ ಸೋಮಯಾಜಿ, ಅಧ್ಯಕ್ಷರು ಮತ್ತು ವಸಂತ ಮಾಧವ, ಸಂಚಾಲಕರು ಹಾಗೂ ಆಡಳಿತ ಮಂಡಳಿ, ಶಿಕ್ಷಕರು, ಶಿಕ್ಷಕೇತರರು ಹಾಗೂ ವಿದ್ಯಾರ್ಥಿಗಳು - ಹಿರಿಯ ವಿದ್ಯಾರ್ಥಿಗಳು.