ಮಂಗಳೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ತೆರಳುವ ಕರಾವಳಿ ಭಾಗದ ಭಕ್ತರಿಗಾಗಿ ಕೆಎಸ್‌ಆರ್‌ಟಿಸಿ ಮಂಗಳೂರು–ಮಂತ್ರಾಲಯ ನಡುವೆ ಪಲ್ಲಕ್ಕಿ ಸ್ಲೀಪರ್ ಬಸ್ ಸೇವೆಯನ್ನು ಒದಗಿಸಿದೆ. ಈ ಮಾರ್ಗದಲ್ಲಿ ಎಸಿ ಹಾಗೂ ನಾನ್-ಎಸಿ ಎಂಬ ಎರಡು ಸ್ಲೀಪರ್ ಬಸ್‌ಗಳು ಸಂಚರಿಸುತ್ತಿದ್ದು, ಪ್ರಯಾಣಿಕರಿಗೆ ರಾತ್ರಿ ಪ್ರಯಾಣಕ್ಕೆ ಅನುಕೂಲವಾಗಿದೆ.
ಬಸ್ ವೇಳಾಪಟ್ಟಿ:
1. ಪಲ್ಲಕ್ಕಿ ನಾನ್-ಎಸಿ ಸ್ಲೀಪರ್
- ಮಂಗಳೂರಿನಿಂದ ನಿರ್ಗಮನ: ಮಧ್ಯಾಹ್ನ 3:31
- ಮಂತ್ರಾಲಯ ತಲುಪುವ ಸಮಯ: ಬೆಳಗ್ಗೆ 6:30
2. ಪಲ್ಲಕ್ಕಿ ಎಸಿ ಸ್ಲೀಪರ್
- ಮಂಗಳೂರಿನಿಂದ ನಿರ್ಗಮನ: ಸಂಜೆ 6:01
- ಮಂತ್ರಾಲಯ ತಲುಪುವ ಸಮಯ: ಬೆಳಗ್ಗೆ 8:15
ಮಾರ್ಗ:
ಮಂಗಳೂರು → ಸುರತ್ಕಲ್ → ಮುಲ್ಕಿ → ಪಡುಬಿದ್ರಿ → ಉಡುಪಿ → ಕುಂದಾಪುರ → ತೀರ್ಥಹಳ್ಳಿ → ಶಿವಮೊಗ್ಗ → ಚಿತ್ರದುರ್ಗ → ಚಳ್ಳಕೆರೆ → ಬಳ್ಳಾರಿ → ಆದೋನಿ → ಮಂತ್ರಾಲಯ
ಮಂತ್ರಾಲಯಕ್ಕೆ ತೆರಳುವ ಭಕ್ತರು ತಮ್ಮ ಪ್ರಯಾಣದ ದಿನಾಂಕಕ್ಕೆ ಅನುಗುಣವಾಗಿ ಕೆಎಸ್‌ಆರ್‌ಟಿಸಿ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಬಸ್ ಲಭ್ಯತೆ, ಆಸನಗಳು ಹಾಗೂ ದರವನ್ನು ಪರಿಶೀಲಿಸಿ ಮುಂಗಡ ಕಾಯ್ದಿರಿಸಿಕೊಳ್ಳುವುದು ಸೂಕ್ತ.





