ವಿಶ್ವ ಸಂಗೀತ ಲೋಕದ ಅಮರ ನಕ್ಷತ್ರ ಮೈಕಲ್ ಜಾಕ್ಸನ್ - ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದ ಕಲಾವಿದ. ವೇದಿಕೆಯಲ್ಲಿ ಅವನ ನೃತ್ಯ ಮಾಯಾಜಾಲವಾಗಿದ್ದರೆ, ಬದುಕಿನಲ್ಲಿ ಅವನು ಆರೋಗ್ಯದ ಬಗ್ಗೆ ಅತೀವ ಜಾಗ್ರತೆ ವಹಿಸಿದ್ದ ವ್ಯಕ್ತಿ ಎಂಬುದು ಬಹಳ ಮಂದಿಗೆ ತಿಳಿದಿಲ್ಲ.
ತಮ್ಮ ದೇಹದ ಬಗ್ಗೆ ಉತ್ತಮ ಖಾಳಜಿ ಇದ್ದ ಒಬ್ಬ ವಿಶ್ವದ ಮಹಾನ್ ಸಂಗೀತ ಕಲಾವಿದ. ಅತ್ಯುತ್ತಮ ವೈದ್ಯಕೀಯ ಆರೈಕೆ ಪಡೆಯುತ್ತಿದ್ದ, ದಿನಚರಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಬದುಕುತ್ತಿದ್ದ ವ್ಯಕ್ತಿಯಾಗಿದ್ದರು ಮೈಕೆಲ್ ಜಾಕ್ಸನ್. ದೇಹಾರೋಗ್ಯ, ಆಹಾರ ಪದ್ಧತಿ, ವಿಶ್ರಾಂತಿ ಎಲ್ಲದರಲ್ಲೂ ಕಟ್ಟುನಿಟ್ಟಾಗಿದ್ದರು.
ಆದರೆ ಇಷ್ಟೆಲ್ಲ ಜಾಗ್ರತೆ ಇದ್ದರೂ, ವಿಧಿಯ ಮುಂದೆ ಮಾನವನ ಯೋಜನೆಗಳು ಸೋಲುತ್ತವೆ ಎಂಬುದಕ್ಕೆ ಮೈಕಲ್ ಜಾಕ್ಸನ್ ಜೀವನವೇ ಸಾಕ್ಷಿಯಾಯಿತು. 2009 ಜೂನ್ 25ರಂದು ಕೇವಲ 50 ವರ್ಷ ವಯಸ್ಸಿನಲ್ಲಿ ಅವರು ಇಹಲೋಕ ತ್ಯಜಿಸಿದರು. ವಿಶ್ವವೇ ನಂಬಲಾರದಷ್ಟು ದೊಡ್ಡ ಆಘಾತ ಅದು. ಕೋಟ್ಯಂತರ ಅಭಿಮಾನಿಗಳಿಗೆ ಆ ದಿನ ಸಂಗೀತವೇ ಮೌನವಾಯಿತು.
ಆದರೆ ಮೈಕಲ್ ಜಾಕ್ಸನ್ ತಮ್ಮ ಸಂಗೀತಕ್ಕಿಂತಲೂ ದೊಡ್ಡ ಗುರುತು ಬಿಟ್ಟು ಹೋದದ್ದು ಅವರ ಮಾನವೀಯತೆ. ಅನಾಥ ಮಕ್ಕಳ ನೆರವಿಗೆ ಧನ ಸಹಾಯ, ರೋಗಿಗಳಿಗೆ ಚಿಕಿತ್ಸಾ ನೆರವು, ಬಡವರ ಬದುಕಿಗೆ ಬೆಳಕು ನೀಡಿದ ಸೇವೆಗಳು — ಇವೆಲ್ಲವೂ ಇಂದಿಗೂ ಜನರ ನೆನಪಿನಲ್ಲಿ ಉಳಿದಿವೆ.
ಜೀವನದ ಸತ್ಯ ಏನೆಂದರೆ — ಹಣ, ಖ್ಯಾತಿ, ಶಕ್ತಿ ಯಾವುದೂ ಸಾವನ್ನು ತಡೆಯಲಾರದು. ಆದರೆ ಒಳ್ಳೆಯತನ ಮಾತ್ರ ಸಾವಿನ ನಂತರವೂ ಬದುಕುತ್ತದೆ. ಮೈಕಲ್ ಜಾಕ್ಸನ್ ಇಂದು ನಮ್ಮ ನಡುವೆ ಇಲ್ಲದಿದ್ದರೂ, ಅವರ ಸಂಗೀತ ಮತ್ತು ಮಾನವೀಯತೆ ಇನ್ನೂ ಜೀವಂತವಾಗಿದೆ.





