ಚೆನ್ನೈ: ಬಿಜೆಪಿ ತೊರೆದಿರುವ ಮಾಜಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ತಮ್ಮ ನಿರ್ಧಾರದ ಕುರಿತು ಪ್ರತಿಕ್ರಿಯೆ ನೀಡಿದ್ದು, ಪಕ್ಷವನ್ನು ಟೀಕಿಸುವ ಉದ್ದೇಶದಿಂದ ಅಲ್ಲ, ಜನರಿಗೆ ಇನ್ನಷ್ಟು ಉತ್ತಮವಾಗಿ ಸೇವೆ ಸಲ್ಲಿಸುವ ಉದ್ದೇಶದಿಂದಲೇ ತಾವು ಬಿಜೆಪಿ ತೊರೆದಿದ್ದೇನೆ ಎಂದು ಹೇಳಿದ್ದಾರೆ.
"ನಾನು ಹಿಂದೂ ಎಂಬ ಗುರುತನ್ನು ಹೊಂದಿದ್ದೇನೆ. ಆದರೆ ಜನಸೇವೆಗೆ ಹೊರಡುವಾಗ ನನ್ನ ಧರ್ಮ ಮತ್ತು ಜಾತಿಯನ್ನು ಮನೆಯಲ್ಲೇ ಬಿಟ್ಟು, ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವದೊಂದಿಗೆ ಸೇವೆ ಸಲ್ಲಿಸುತ್ತೇನೆ. ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವ ಮಾರ್ಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ" ಎಂದು ಅಣ್ಣಾಮಲೈ ತಿಳಿಸಿದ್ದಾರೆ.
ಬಿಜೆಪಿಯ ತಮಿಳುನಾಡು ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅಣ್ಣಾಮಲೈ ಇತ್ತೀಚಿಗಷ್ಟೇ ಬಿಜೆಪಿ ಪಕ್ಷ ತೊರೆದು ತಮಿಳುನಾಡಿನಲ್ಲಿ ಹೊಸ ಸಂಘಟನೆ ಕಟ್ಟಿರುತ್ತಾರೆ.





