23 August 2026 |

‘ಚೈನೀಸ್‌ ಎಂದು ಕರೆಯಬೇಡಿ, ಇಂಡಿಯನ್‌ ಎಂದು ಕರೆಯಿರಿ’: ಅರುಣಾಚಲದ ಪುಟ್ಟ ಬಾಲಕಿಯ ವಿಡಿಯೊ ವೈರಲ್

  • 22 Aug 2026 03:06:34 PM

ಇಟಾನಗರ: ಅರುಣಾಚಲ ಪ್ರದೇಶದ ಪುಟ್ಟ ಬಾಲಕಿ ಕಾರ್ಗಾ ಟಿಂಕಲ್ ಗೊಂಗೊ ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರ ಗಮನ ಸೆಳೆದಿದೆ.

 

ಯಾರೋ ತಮ್ಮನ್ನು ‘ಚೈನೀಸ್‌’ ಎಂದು ಕರೆದಿದ್ದರಿಂದ ಬೇಸರಗೊಂಡ ಬಾಲಕಿ, “ಚೈನೀಸ್‌ ಎಂದು ಕರೆಯಬೇಡಿ, ಇಂಡಿಯನ್‌ ಎಂದು ಕರೆಯಿರಿ” ಎಂದು ಮುಗ್ಧವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಮಾತಿನ ಬಳಿಕ ಬಾಲಕಿ ರಾಷ್ಟ್ರಗೀತೆ ‘ಜನ ಗಣ ಮನ’ವನ್ನೂ ಹಾಡಿದ್ದಾರೆ. 

 

ಇಟಾನಗರದ ಈ ಬಾಲಕಿಯ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಕೇವಲ ಮುಖದ ಹೋಲಿಕೆಯ ಆಧಾರದ ಮೇಲೆ ಈಶಾನ್ಯ ಭಾರತದ ಜನರನ್ನು ಬೇರೆ ದೇಶದವರು ಎಂದು ಕರೆಯಬಾರದು ಎಂಬ ಸಂದೇಶವೂ ಈ ವಿಡಿಯೊ ಮೂಲಕ ಮತ್ತೊಮ್ಮೆ ಗಮನ ಸೆಳೆದಿದೆ. 

 

ಬಾಲಕಿಯ ತಾಯಿ ಕೂಡ ಈ ವಿಡಿಯೊ ಇಷ್ಟೊಂದು ವೈರಲ್ ಆಗುತ್ತದೆ ಎಂದು ತಾವು ನಿರೀಕ್ಷಿಸಿರಲಿಲ್ಲ ಎಂದು ತಿಳಿಸಿದ್ದಾರೆ. ಬಾಲಕಿ ಈ ಘಟನೆಗೆ ಬೇಸರಗೊಂಡಿದ್ದಳು ಎಂದು ಅವರು ಹೇಳಿದ್ದಾರೆ. 

 

ಪುಟ್ಟ ಬಾಲಕಿಯ ಮುಗ್ಧ ಮಾತು ಮತ್ತು ದೇಶದ ಮೇಲಿನ ಪ್ರೀತಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಲವರ ಮನ ಗೆದ್ದಿದೆ.