05 September 2026 |

ಯಶವಂತಪುರ–ಮಂಗಳೂರು ನಡುವೆ ಸೆ. 5ರಂದು ವಂದೇ ಭಾರತ್ ಪ್ರಾಯೋಗಿಕ ಸಂಚಾರ

  • 04 Sep 2026 05:00:37 PM

ಬೆಂಗಳೂರು: ಯಶವಂತಪುರ ಮತ್ತು ಮಂಗಳೂರು ಸೆಂಟ್ರಲ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರವನ್ನು ಸೆಪ್ಟೆಂಬರ್ 5ರಂದು ನಡೆಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

 

ರೈಲ್ವೆ ಮಂಡಳಿಯ ಸೂಚನೆಯಂತೆ ನಡೆಯಲಿರುವ ಈ ಟ್ರಯಲ್ ರನ್‌ನಲ್ಲಿ 16 ಬೋಗಿಗಳ ವಂದೇ ಭಾರತ್ ರೈಲು ಸಂಚರಿಸಲಿದೆ.

 

ಪ್ರಯೋಗಾರ್ಥ ಸಂಚಾರದ ವೇಳೆ ರೈಲಿನ ಕಾರ್ಯಾಚರಣೆ, ನಿಲುಗಡೆ ಹಾಗೂ ಪ್ರಯಾಣದ ಸಮಯ ಸೇರಿದಂತೆ ವಿವಿಧ ಅಂಶಗಳನ್ನು ರೈಲ್ವೆ ಅಧಿಕಾರಿಗಳು ಪರಿಶೀಲಿಸಲಿದ್ದಾರೆ. 

 

ಈ ಪ್ರಾಯೋಗಿಕ ಸಂಚಾರ ಯಶಸ್ವಿಯಾದ ಬಳಿಕ ಯಶವಂತಪುರ–ಮಂಗಳೂರು ನಡುವೆ ವಂದೇ ಭಾರತ್‌ನ ನಿಯಮಿತ ಸೇವೆ ಆರಂಭಿಸುವ ಕುರಿತು ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

 

ಕರಾವಳಿ ಕರ್ನಾಟಕದ ಪ್ರಯಾಣಿಕರಿಗೆ ಬಹುದಿನಗಳಿಂದ ನಿರೀಕ್ಷೆಯಲ್ಲಿರುವ ಈ ರೈಲು ಸೇವೆ ಬೆಂಗಳೂರು–ಮಂಗಳೂರು ಸಂಪರ್ಕವನ್ನು ಮತ್ತಷ್ಟು ಸುಧಾರಿಸುವ ಸಾಧ್ಯತೆಯಿದೆ.