05 September 2026 |

ಹಸುವಿನ ಚಿತ್ರ ಕಂಡ ಕರು… ಹಾಲು ಕುಡಿಯಲು ಮಾಡಿದ ಮುಗ್ಧ ಯತ್ನ ವೈರಲ್!

  • 04 Sep 2026 08:38:06 PM

ಹಸಿವಿನಿಂದ ಬಳಲುತ್ತಿದ್ದ ಕರುವೊಂದು ಡೇರಿ ವಾಹನದ ಮೇಲೆ ಮುದ್ರಿಸಲಾಗಿದ್ದ ಹಸುವಿನ ಚಿತ್ರದಿಂದ ಹಾಲು ಕುಡಿಯಲು ಯತ್ನಿಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ವಾಹನದ ಪಕ್ಕದಲ್ಲಿ ನಿಂತಿದ್ದ ಕರು, ಅದರ ಮೇಲಿದ್ದ ಹಸುವಿನ ಚಿತ್ರವನ್ನು ನೋಡಿ ಹಾಲು ಕುಡಿಯುವಂತೆ ಚಿತ್ರಕ್ಕೆ ಬಾಯಿ ಹಾಕಿದೆ. ಕರುವಿನ ಈ ಮುಗ್ಧ ವರ್ತನೆ ಕಂಡ ಸ್ಥಳೀಯರು ಭಾವುಕರಾಗಿದ್ದಾರೆ.

 

ಈ ಅಪರೂಪದ ಕ್ಷಣದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕರುವಿನ ಮುಗ್ಧತೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.