24 October 2026 |

ಮಹತೋಬಾರ ಶ್ರೀ ಚಿಂತಾಮಣಿ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ

  • 23 Oct 2026 07:21:20 PM

ಕಡೇಶಿವಾಲ್ಯ: ಮಹತೋಬಾರ ಶ್ರೀ ಚಿಂತಾಮಣಿ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ದಿನಾಂಕ 10-11-2026ರ ಮಂಗಳವಾರ ನಡೆಯಲಿರುವ ಷಡಾಧಾರ (ಕುಂಭನ್ಯಾಸ) ಕಾರ್ಯಕ್ರಮ ಹಾಗೂ ದಿನಾಂಕ 31-10-2026ರ ಶನಿವಾರ ನೂತನ ಧ್ವಜಸ್ತಂಭವನ್ನು ಶೋಭಾಯಾತ್ರೆಯ ಮೂಲಕ ಕ್ಷೇತ್ರಕ್ಕೆ ತರುವ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು.

 

ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ್ ಶೆಟ್ಟಿ ನುಳಿಯಲು, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಡಾ. ಶ್ರೀಪತಿ ರಾವ್ ದಾಳಿಂಬ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಈಶ್ವರ ಪೂಜಾರಿ ಹಿರ್ತಡ್ಕ, ಸತೀಶಚಂದ್ರ ಶೆಟ್ಟಿ ಬಾವಾಗುತ್ತು, ಶೀನ ನಾಯ್ಕ್ ನೆಕ್ಕಿಲಾಡಿ, ಸಂಜೀವ ಪೂಜಾರಿ ದಾಸಕೋಡಿ, ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ಸುರೇಶ್ ರಾಜೀವ ಶೆಟ್ಟಿ ನಡುಮೊಗರು ಗುತ್ತು, ಹರಿಶ್ಚಂದ್ರ ಕಾಡಬೆಟ್ಟು, ಕೂಸಪ್ಪ ಪೂಜಾರಿ ಪುಸ್ಕೆದಡಿ, ಗೌರವ ಸಲಹೆಗಾರರಾದ ಗಿರಿಯಪ್ಪ ಗೌಡ ಶಾಂತಿಲ ಪೆರ್ಲಾಪು, ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು, ಗಂಗಾಧರ್ ಸೇರಾ, ಚೆನ್ನಪ್ಪ ಅಂಚನ್ ಸುರ್ಲಾಜೆ, ರಮೇಶ್ ಕೆ. ರಥಬೀದಿ, ಪುರುಷೋತ್ತಮ್ ಶೆಟ್ಟಿ ಕಲ್ಲಾಜೆ, ಮಾಧವ ರೈ ಅಮೈ ಭಂಡಶಾಲೆ ಹಾಗೂ ವರಮಹಾಲಕ್ಷ್ಮೀ ಸೇವಾ ಸಮಿತಿಯ ಸದಸ್ಯರಾದ ಪುಷ್ಪ, ವನಿತಾ, ಉಷಾ ಶೆಟ್ಟಿ, ಶುಭದ ಶೆಟ್ಟಿ ಸೇರಿದಂತೆ ಬೈಲುವಾರು ಸಮಿತಿಯ ಸಂಚಾಲಕರು ಉಪಸ್ಥಿತರಿದ್ದರು.