24 October 2026 |

ಬ್ರಹ್ಮಾವರದಲ್ಲಿ ಲಾರಿ ಡಿಕ್ಕಿ: 62 ವರ್ಷದ ಸೈಕಲ್ ಸವಾರ ದುರ್ಮರಣ

  • 24 Oct 2026 08:56:53 AM

ಉಡುಪಿ: ಜಿಲ್ಲೆಯ ಬ್ರಹ್ಮಾವರ ಸಮೀಪದ ಮಾಬುಕಳದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸೈಕಲ್ ಸವಾರ ರೊನಾಲ್ಡ್ ಲೂಯಿಸ್ (62) ಮೃತಪಟ್ಟಿದ್ದಾರೆ.

 

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ದಾಟುತ್ತಿದ್ದ ರೊನಾಲ್ಡ್ ಲೂಯಿಸ್ ಅವರಿಗೆ ಕಾಪುವಿನಿಂದ ಕುಮಟಾ ಕಡೆಗೆ ಸಂಚರಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಬ್ರಹ್ಮಾವರ ಆಸ್ಪತ್ರೆಗೆ ದಾಖಲಿಸಲಾಯಿತು.

 

ಆದರೆ, ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ರೊನಾಲ್ಡ್ ಲೂಯಿಸ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.