
ಬಂಟ್ವಾಳ: ಹುಟ್ಟೂರ ಅಭಿನಂದನಾ ಸಮಿತಿ ವತಿಯಿಂದ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಇದರ ಸಂಸ್ಥಾಪಕರಾದ ಅರ್ಜುನ್ ಭಂಡಾರ್ಕರ್ ಇವರಿಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮ ಬಂಟ್ವಾಳ ಸ್ವರ್ಣಸೌಧ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶುಭ ಸಂಸ್ಥೆಯ ಮಾಲಕರು ಭುವನೇಶ್ ಪಚಿನಡ್ಕ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಗಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಾಲ್ಟರ್ ನಂದಳಿಕೆ “ಕಿರಿಯ ವಯಸ್ಸಿನಲ್ಲೇ ಮಾನವೀಯ ಮೌಲ್ಯಗಳ ಜೊತೆ ಸೇವೆಯಲ್ಲೇ ಸಂತೃಪ್ತಿ ಕಾಣುವ ಸೇವಾಮನೋಭಾವದ ಬದುಕು ಎಲ್ಲರಿಗೂ ಪ್ರೇರಕ ಎಂದು“ ಅಭಿನಂದನಾ ನುಡಿಗಳಾನ್ನಾಡಿದರು.
ವಿ.ಎನ್.ಆರ್ ಗೋಲ್ಡ್ ಮಾಲಕರು ನಾಗೇಂದ್ರ ಎ ಬಾಳಿಗ ಅಧ್ಯಕ್ಷತೆ ವಹಿಸಿದ್ದರು. ಅಂಚನ್ ಸಿಲ್ಕ್ಸ್ ಮಾಲಕರು ಪ್ರಕಾಶ್ ಅಂಚನ್, ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಜಿ.ಎಸ್.ಬಿ ಸೇವಾ ಸಂಘ ಬಂಟ್ವಾಳ ಅಧ್ಯಕ್ಷರು ಎನ್ ಲಕ್ಷ್ಮೀನಾರಾಯಣ ಮಲ್ಯ, ಸಾಮಾಜಿಕ ಕಾರ್ಯಕರ್ತ ಫಯಾಝ್ ಮಾಡೂರು, ಮಾಜಿ ಕಾರ್ಪೊರೇಟರ್ ಸಂಗೀತಾ ಆರ್ ನಾಯಕ್, ಭಾಗ್ಯಶ್ರೀ ಅರ್ಜುನ್ ಭಂಡಾರ್ಕರ್ ಉಪಸ್ಥಿತರಿದ್ದರು.
4 ಅಶಕ್ತ ಕುಟುಂಬಗಳಿಗೆ ಆರೋಗ್ಯ ನಿಧಿ ವಿತರಿಸಲಾಯಿತು ಹಾಗೂ ಸರಕಾರಿ ವಸತಿ ಶಾಲೆಗೆ ಕಂಪ್ಯೂಟರ್ ಕೊಡುಗೆಯಾಗಿ ನೀಡಲಾಯಿತು. ವಿವಿಧ ಸಂಘ ಸಂಸ್ಥೆಗಳು ಭಾಗವಹಿಸಿ ಸನ್ಮಾನಿತರನ್ನು ಅಭಿನಂದಿಸಿದರು. ಗಿರೀಶ್ ಪೈ ಸ್ವಾಗತಿಸಿ, ಸಚಿನ್ ಸುವರ್ಣ ಪ್ರಾಸ್ತಾವನೆಗೈದು, ಕುಸುಮಾಕರ್ ಕುಂಪಲ ಅಭಿನಂದನಾ ಪತ್ರವನ್ನು ವಾಚಿಸಿದರು. ಅಜಿತ್ ಕುಮಾರ್ ಧನ್ಯವಾದ ನೀಡಿ, ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.





