ಬಾಳ್ತಿಲ ಗ್ರಾಮ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ಆಶ್ರಯದಲ್ಲಿ ವಿಜೃಂಭಣೆಯ ಮಹಿಳಾ ದಿನಾಚರಣೆ ಕಾರ್ಯಕ್ರಮ

  • 08 Mar 2025 04:29:34 PM

ಬಾಳ್ತಿಲ, ಮಾರ್ಚ್ 08, 2025 : ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಪಂಚಾಯತ್ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಬಾಳ್ತಿಲ ಗ್ರಾಮ ಪಂಚಾಯತ್ ನ ಜಂಟಿ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಮಾರ್ಚ್ 8ನೇ, 2025 ರಂದು ಹಮ್ಮಿಕೊಳ್ಳಲಾಯಿತು.

 

ಎಚ್ ಡಿ ಎಫ್ ಸಿ ಬ್ಯಾಂಕಿನ ವತಿಯಿಂದ ದಾಸಕೋಡಿ ಅಂಗನವಾಡಿ ಸ್ತ್ರೀ ಶಕ್ತಿ ಮಹಿಳೆಯರಿಗೆ, ಪೋಷಕರಿಗೆ ಮತ್ತು ಮಕ್ಕಳಿಗೆ ಸ್ಪರ್ಧೆ ಏರ್ಪಡಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ, ದಾಸಕೋಡಿ ಅಂಗನವಾಡಿಯ ಅತ್ಯುತ್ತಮ ಸ್ತ್ರೀ ಶಕ್ತಿ ಸ್ವಸಹಾಯ ಗುಂಪು ಶ್ರೀಕೃಷ್ಣ ಸ್ತ್ರೀ ಶಕ್ತಿ ಗುಂಪಿಗೆ ದೊರಕಿತು.

 

 

ಈ ಕಾರ್ಯಕ್ರಮದಲ್ಲಿ ಬಾಳ್ತಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಶ್ರೀಮತಿ ರಂಜಿನಿ, ಎಚ್ ಡಿ ಎಫ್ ಸಿ ಬ್ಯಾಂಕಿನ ಮ್ಯಾನೇಜರ್ ಶ್ರೀ ಕಿಶೋರ್ ಹಾಗೂ ಬ್ಯಾಂಕಿನ ಸಿಬ್ಬಂದಿಗಗಳಾದ ಶ್ರೀ ಸಂಕೇತ್, ಕು. ದೀಪ್ತಿ ಹಾಗೂ ಶ್ರೀಕೃಷ್ಣ, ಶ್ರೀದೇವಿ, ಶ್ರೀರಾಮ, ಶ್ರೀದುರ್ಗಾ ಗುಂಪಿನ ಎಲ್ಲಾ ಸದಸ್ಯರು ಮತ್ತು ಅಂಗನವಾಡಿ ಕೇಂದ್ರದ ಪೋಷಕರು ಹಾಜರಿದ್ದರು.

 

ಕಾರ್ಯಕ್ರಮವನ್ನು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಲಲಿತ ನಿರೂಪಿಸಿದರು. ಸ್ತ್ರೀ ಶಕ್ತಿ ಗುಂಪಿನ ಪ್ರತಿನಿಧಿ ಶ್ರೀಮತಿ ಪದ್ಮಿನಿ ಸ್ವಾಗತಿಸಿದರು. ಸ್ತ್ರೀ ಶಕ್ತಿ ಗುಂಪಿನ ಮಮತಾ ವಂದನಾರ್ಪಣೆ ಮಾಡಿದರು.

 

ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಅಥವಾ ಇನ್ನಿತರ ಯಾವುದೇ ಸಾಧನ ಕ್ಷೇತ್ರವನ್ನು ನೆನಯುವ ದಿನವೇ ಅಂತಾರಾಷ್ಟ್ರೀಯ ಮಹಿಳಾ ದಿವಸ. ಮಹಿಳೆಯರ ಶಕ್ತಿ, ಧೈರ್ಯ, ತ್ಯಾಗ, ಪರಿಶ್ರಮಕ್ಕೆ ವಂದನೆ ಹೇಳಬೇಕು. ಅವರು ಪ್ರತಿಕ್ಷಣವೂ ಸಂತೋಷವಾಗಿರಲಿ, ಅವರ ಹೋರಾಟಕ್ಕೆ ಬೆಂಬಲವಿರಬೇಕು, ಈ ಎಲ್ಲಾ ಉದ್ದೇಶಗಳನ್ನು ಇಟ್ಟುಕೊಂಡು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಬಾಳ್ತಿಲ ಗ್ರಾಮ ಪಂಚಾಯತ್ ನ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮವು ಸಂತೋಷಭರಿತವಾಗಿ ಕೊನೆಗೊಂಡಿತು.