ಮಾರ್ಚ್ 17, 2025 ರಂದು ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ, ನಿಟಿಲಾಪುರದಲ್ಲಿ ಶ್ರೀ ದೇವರ ವರ್ಷಾವಧಿ ಜಾತ್ರೋತ್ಸವ ಹಾಗೂ ಶ್ರೀ ಮನ್ಮಹಾರಥೋತ್ಸವದ ಸಂಭ್ರಮ

  • 11 Mar 2025 07:24:03 PM

ಬಂಟ್ವಾಳ, ಮಾರ್ಚ್ 11, 2025 : ಬಂಟ್ವಾಳ ತಾಲೂಕು, ಗೋಳ್ತಮಜಲು ಗ್ರಾಮದ ಮೊಗರ್ನಾಡು ಸಾವಿರ ಸೀಮೆಯ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ, ನಿಟಿಲಾಪುರದಲ್ಲಿ ಶ್ರೀ ದೇವರ ವರ್ಷಾವಧಿ ಜಾತ್ರೋತ್ಸವ ಹಾಗೂ ಶ್ರೀ ಮನ್ಮಹಾರಥೋತ್ಸವದ ದಿನಾಂಕ 14ನೇ ಮಾರ್ಚ್ 2025, ಶುಕ್ರವಾರ ಆರಂಭಗೊಂಡು, ದಿನಾಂಕ 18ನೇ ಮಾರ್ಚ್ 2025 ಮಂಗಳವಾರದವರಿಗೆ ನಡೆಯಲಿದೆ.

 

ಬ್ರಹ್ಮಶ್ರೀ ನೀಲೇಶ್ವರ ವೇl ಮೂl ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವುದು. ದಿನಾಂಕ 14 ಮಾರ್ಚ್ 2025 ನೇ ಶುಕ್ರವಾರ ಜರಗುವ ಧ್ವಜಾರೋಹಣ ಹಾಗೂ ದಿನಾಂಕ 17 ಮಾರ್ಚ್ 2025 ನೇ ಸೋಮವಾರ ಜರಗುವ ದರ್ಶನ ಬಲಿ ಉತ್ಸವ ಮತ್ತು ಶ್ರೀ ಮನ್ಮಹಾರಥೋತ್ಸವಕ್ಕೆ ಭಕ್ತಾದಿಗಳನ್ನು ಆಹ್ವಾನಿಸಿ, ಶ್ರೀ ದೇವರ ಪೂರ್ಣಾನುಗ್ರಹವನ್ನು ಪಡೆಯಬೇಕಾಗಿ ವಿನಂತಿಸಿರುತ್ತಾರೆ.

 

ದಿನಾಂಕ 26 ಮಾರ್ಚ್ 2025 ನೇ ಬುಧವಾರ ಶ್ರೀ ದೇವರ ಪ್ರತಿಷ್ಠಾ ದಿನದ ಪ್ರಯುಕ್ತ ಮಧ್ಯಾಹ್ನ ಶತರುದ್ರಾಭಿಷೇಕ, ಮಹಾಪೂಜೆ, ನಂತರ ಅನ್ನ ಸಂತರ್ಪಣೆ ಹಾಗೂ ರಾತ್ರಿ ಶ್ರೀ ದೇವರಿಗೆ ರಂಗಪೂಜೆ ನಡೆಯಲಿರುವುದು. ದಿನಾಂಕ 19 ಮಾರ್ಚ್ 2025 ರಂದು ಶ್ರೀ ದೇವರ ಸನ್ನಿದಿಯಲ್ಲಿ ಪಿಲಿಚಾಮುಂಡಿ ಮತ್ತು ಪಂಜುರ್ಲಿ ದೈವಗಳ ನೇಮೋತ್ಸವ ನೆರವೇರಲಿದೆ.

 

ದಿನಾಂಕ 03 ಏಪ್ರಿಲ್ 2025ನೇ ಗುರುವಾರ ರಾತ್ರಿ ಗಂಟೆ 7ರಿಂದ ಚಾಮುಂಡಿಬೆಟ್ಟದಲ್ಲಿ ಶ್ರೀ ಕ್ಷೇತ್ರದ ದೈವಗಳಿಗೆ ನೇಮೋತ್ಸವ ಕೂಡ ಜರಗಲಿದೆ. ಈ ಎಲ್ಲಾ ದೇವರ ಕಾರ್ಯಕ್ರಮಗಳಲ್ಲಿ ಮತ್ತು ಇನ್ನಿತರ ಎಲ್ಲಾ ಭಕ್ತಿಯ ಕಾರ್ಯಕ್ರಮಗಳಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತಾಧಿಕಾರಿ ಜೈಪ್ರಕಾಶ್.ಸಿ. ಶ್ರೀ ಕ್ಷೇತ್ರ ನಿಟಿಲಾಪುರ ಹಾಗೂ ಊರಿನ ಮತ್ತು ಮೊಗರ್ನಾಡು ಸಾವಿರ ಸೀಮೆಯ ಭಕ್ತಾದಿಗಳು ವಿನಂತಿಸುತ್ತಿದ್ದಾರೆ.