ಬಾಳ್ತಿಲ, ಕುರ್ಮಾನು : ಬಂಟ್ವಾಳ ತಾಲೂಕು, ಬಾಳ್ತಿಲ ಗ್ರಾಮದ ಕುರ್ಮಾನು ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ಮೂಲಸ್ಥಾನ, ಮಂಜನಗುಡ್ಡೆಯಲ್ಲಿ ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವ ಇದೇ ಬರುವ ದಿನಾಂಕ ಏಪ್ರಿಲ್ 07, 2025 ಸೋಮವಾರ ಮತ್ತು ಏಪ್ರಿಲ್ 08, 2025 ಮಂಗಳವಾರ ನಡೆಯಲಿದೆ.
ದಿನಾಂಕ ಏಪ್ರಿಲ್ 01ನೇ ಮಂಗಳವಾರ ಬೆಳಗ್ಗೆ 10:00ಕ್ಕೆ ಗೊನೆ ಮುಹೂರ್ತ ನಡೆಯಲಿದ್ದು, ದಿನಾಂಕ ಏಪ್ರಿಲ್ 08 ರ ರಾತ್ರಿ 8:30ರಿಂದ ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ಕೆರೆ ನೇಮೋತ್ಸವ ಅದ್ದೂರಿಯಾಗಿ ನೆರವೇರಲಿದೆ. ಗೊನೆ ಮುಹೂರ್ತದ ದಿನದಿಂದ ಹಿಡಿದು ದಿನಾಂಕ 09, ಏಪ್ರಿಲ್ 2025ರ, ಶ್ರೀ ದೈವದ ಭಂಡಾರ ನಿರ್ಗಮನದ ವರೆಗೆ ಬಹಳ ಕಾರ್ಯಕ್ರಮಗಳು ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ.
ಶ್ರೀ ಕ್ಷೇತ್ರದ ಎಲ್ಲಾ ಕಾರ್ಯಕ್ರಮಗಳ ವಿವರ ಈ ಕೆಳಗೆ ಲಗತ್ತಿಸಿದ ಆಮಂತ್ರಣ ಪತ್ರದಲ್ಲಿ ನಮೂದಿಸಲಾಗಿದೆ;


ಈ ಪುಣ್ಯ ಕಾರ್ಯಕ್ರಮದಲ್ಲಿ ಭಗವದ್ಭಕ್ತರಾದ ತಾವೆಲ್ಲರೂ ಭಾಗವಹಿಸಿ, ತಾನು-ಮನ-ಧನಗಳಿಂದ ಸಹಕರಿಸಿ, ಗಂಧಪ್ರಸಾದ ಸ್ವೀಕರಿಸಿ, ಶ್ರೀ ದೈವದ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವವರು, ಸರ್ವ ಸದಸ್ಯರು, ಆಡಳಿತ ಸಮಿತಿ, ಉತ್ಸವ ಸಮಿತಿ, ಮಾತೃ ಸಮಿತಿ ಹಾಗೂ ಊರ ಹತ್ತು ಸಮಸ್ತರು.





