ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ವಿದ್ಯಾನಗರ ಪೆರಾಜೆ, ಮಾಣಿ - ಒಂದಾನೊಂದು ಕಾಲದಲ್ಲಿ... ಮೊಬೈಲ್ ಇಲ್ಲದ ಊರಿನಲ್ಲಿ - ಅಜ್ಜಿ ಮನೆ ಬೇಸಿಗೆ ಶಿಬಿರ

  • 22 Mar 2025 07:51:46 PM

ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ವಿದ್ಯಾನಗರ ಪೆರಾಜೆ, ಮಾಣಿ - ಒಂದಾನೊಂದು ಕಾಲದಲ್ಲಿ... ಮೊಬೈಲ್ ಇಲ್ಲದ ಊರಿನಲ್ಲಿ - ಅಜ್ಜಿ ಮನೆ ಬೇಸಿಗೆ ಶಿಬಿರ

 

ಒಂದಾನೊಂದು ಕಾಲದಲ್ಲಿ... ಮೊಬೈಲ್ ಇಲ್ಲದ ಊರಿನಲ್ಲಿ" ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ವಿದ್ಯಾನಗರ ಪೆರಾಜೆ, ಮಾಣಿ "ಅಜ್ಜಿ ಮನೆ" ಬೇಸಿಗೆ ಶಿಬಿರ ನಡೆಯಲಿದೆ. ಮೊಬೈಲ್ ನಲ್ಲಿ ಮುಳುಗಿರುವ ಮಕ್ಕಳಿಗೆ ಬಾಹ್ಯ ಪ್ರಪಂಚವನ್ನು ಪರಿಚಯಿಸುವ ಪುಟ್ಟ ಪ್ರಯತ್ನ ಮಾಡಲಿದ್ದಾರೆ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ವಿದ್ಯಾನಗರ ಪೆರಾಜೆ, ಮಾಣಿ ಶಾಲೆಯವರು.

 

ಏಪ್ರಿಲ್ 02, 2025 ರಿಂದ 08 ಏಪ್ರಿಲ್ 2025 ರವರೆಗೆ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.00 ರವರೆಗೆ ನಡೆಯಲಿದೆ. ಪ್ರವೇಶ ಉಚಿತವಾಗಿದ್ದು, ಎಲ್ಲಾ ಶಾಲಾ ಮಕ್ಕಳಿಗೆ ಭಾಗವಹಿಸಲು ಮುಕ್ತ ಅವಕಾಶವಿದೆ. ಉಪ್ಪಿನಂಗಡಿ, ಪುತ್ತೂರು, ವಿಟ್ಲ, ಮುಡಿಪು, ಬಿ.ಸಿ ರೋಡ್ ಪರಿಸರದಿಂದ ಶಿಬಿರಕ್ಕೆ ಬರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ವಾಹನದ ಸೌಲಭ್ಯ ಒದಗಿಸಲಾಗುವುದು.

 

ಈ ಶಿಬಿರದಲ್ಲಿ ಇರಲಿರುವ ಚಟುವಟಿಕೆಗಳ ವಿವರ ಹೀಗಿದೆ

* ಜಾನಪದ ಆಟಗಳು

* ಹಳ್ಳಿ ತಿನಸುಗಳ ತಯಾರಿಕೆ

* ಇಂದ್ರಜಾಲ ( ಮ್ಯಾಜಿಕ್ )

* ಪ್ರಕೃತಿಯ ಮಡಿಲಲ್ಲಿ ಒಂದು ದಿನ

* ಗುತ್ತಿನ ಮನೆಗೆ ಹೊರಸಂಚಾರ

* ಮಣ್ಣಿನ ಮಡಕೆ, ತೆಂಗಿನ ಗರಿಯ ಆಟಿಕೆಗಳ ತಯಾರಿ

* 90 ರ ದಶಕದ ವಾರಪತ್ರಿಕೆ, ಮಾಸಪತ್ರಿಕೆಗಳ ಅನಾವರಣ

 

ಎಲ್ಲಾ ಶಾಲೆಯ ನರ್ಸರಿ ತರಗತಿಯಿಂದ 9ನೇ ತರಗತಿಯವರೆಗಿನ ಮಕ್ಕಳಿಗೆ ಭಾಗವಹಿಸಲು ಮುಕ್ತ ಅವಕಾಶವಿದೆ. ಈ ಉಚಿತ ಪ್ರವೇಶದ "ಅಜ್ಜಿ ಮನೆ" ಬೇಸಿಗೆ ಶಿಬಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ.