ಕಡೇಶಿವಾಲಯ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದಲ್ಲಿ ತಲೆಯೆತ್ತಿ ಜಿಲ್ಲೆಯಾದ್ಯಂತ ಸಮಾಜ ಮುಖಿ ಸೇವೆ ಮಾಡುತ್ತಿರುವ ಸಂಘಟನೆ " ಯುವಶಕ್ತಿ ಕಡೇಶಿವಾಲಯ ". ಇದೇ ಬರುವ ಫೆಬ್ರವರಿ 15, 2025 ರ ಶನಿವಾರದಂದು, ಕಡೇಶಿವಾಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ಲಾಪ್ ನಲ್ಲಿ ಇದರ ಅದ್ದೂರಿ ವಾರ್ಷಿಕೋತ್ಸವ ನಡೆಯಲಿದೆ. "ಸಂತೃಪ್ತಿ" ಹೆಸರಿನಲ್ಲಿ ಯುವಶಕ್ತಿ ಕಡೇಶಿವಾಲಯದ ಅದ್ದೂರಿ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭದಲ್ಲಿ ಕಡೇಶಿವಾಲಯ ಯುವಶಕ್ತಿ ಸಹಕಾರ ಮತ್ತು ನೇತೃತ್ವದಲ್ಲಿ ನಿರ್ಮಾಣವಾದ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭ ನಡೆಯಲಿದೆ. ಟೀಮ್ ವೈ ಯಸ್ ಕೆ (Team YSK) ಎನ್ನುವ ಅಧಿಕೃತ ವೆಬ್ ಸೈಟ್ ಕೂಡ ಅಂದೇ ಬಿಡುಗಡೆಗೊಳ್ಳಲಿದೆ. ಜೊತೆಗೆ ರಕ್ತದಾನ ಶಿಬಿರ, ಯುವರತ್ನ ಸನ್ಮಾನ, ಸೇವಾಲಕ್ಷ್ಯ - ನೂರು ಲಕ್ಷ ಮತ್ತು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ಕೂಡ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳ ಜೊತೆಗೆ, ಸಭಾ ಕಾರ್ಯಕ್ರಮ, ಅನೇಕ ಗಣ್ಯರ ಆಗಮನ, ಸಾಧಕರ ಸನ್ಮಾನ ಕಾರ್ಯಕ್ರಮ ಕೂಡ ನಡೆಯಲಿದೆ.
ಫೆಬ್ರವರಿ 15 ರಂದು ಬೆಳಗ್ಗೆ ಯುವಶಕ್ತಿ ಕಡೇಶಿವಾಲಯ ಸಂಘಟನೆಯ ನೇತೃತ್ವದಲ್ಲಿ ನಿರ್ಮಾಣವಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ಲಾಪ್ ಇದರ ಶಾಲಾ ಕೊಠಡಿಗಳ ಉದ್ಘಾಟನೆ ಸಮಾರಂಭ ನಡೆಯಲಿದೆ. ತದ ನಂತರ ಯುವಶಕ್ತಿಯ ಯಶಸ್ವಿ ಯೋಜನೆಯಾಗಿರುವ ರಕ್ತ ದಾನ ಶಿಬಿರ ಕೂಡ ನೆರವೇರಲಿದೆ. ಸಂಜೆ ತಮ್ಮ ಯೋಜನಾ ಕಾರ್ಯಕ್ರಮಕ್ಕೆ ಸಂಬಂಧ ಪಟ್ಟ ವೆಬ್ ಸೈಟ್ ಆಗಿರುವ ಟೀಮ್ ವೈ ಯಸ್ ಕೆ ಗೆ ಚಾಲನೆ. ಸಂಜೆ ಯುವರತ್ನ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು ಸಾಧಕರಿಗೆ ಸನ್ಮಾನ ಮಾಡಿ ಅಭಿನಂದಿಸಲಾಗುಹುದು. ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪ್ರಸ್ತುತ ವಿಧಾನಸಭಾ ಅಧ್ಯಕ್ಷರಾಗಿರುವ ಯು ಟಿ ಖಾದರ್, ದಕ್ಷಿಣ ಕನ್ನಡ ಸಂಸದ ಬೃಜೇಶ್ ಚೌಟ, ಬಂಟ್ವಾಳ ಶಾಸಕರಾಗಿರುವ ರಾಜೇಶ್ ನಾಯ್ಕ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಸಂಜೆ 6 ಗಂಟೆಗೆ ಅದ್ದೂರಿ ವೇದಿಕೆಯಲ್ಲಿ ಗಾನ ನಾಟ್ಯ ವೈಭವ ಯುವ ಸಂಜೆ ಸ್ಥಳೀಯ ಪ್ರತಿಭೆಗಳಿಂದ ಮತ್ತು ರಾತ್ರಿ 8:30 ಕ್ಕೆ ಸರಿಯಾಗಿ ಸಾಯಿಶಕ್ತಿ ಬಳಗ ಮಂಗಳೂರು ತಂಡದವರಿಂದ ತುಳು ಜಾನಪದ ಸಿನಿ ನಾಟಕ ಜೋಡು ಜೀಟಿಗೆ ನಡೆಯಲಿದೆ.
ಇದರ ಜೊತೆಗೆ ಯುವರತ್ನ ಸನ್ಮಾನ ಕಾರ್ಯಕ್ರಮದಲ್ಲಿ ಹಲವಾರು ಸಾಧಕರಿಗೆ ಸನ್ಮಾನ ನಡೆಯಲಿದೆ. ಸಮಾಜ ಸೇವಕ ರವಿ ಕಟಪಾಡಿ ಅವರಿಗೆ ಯುವ ಸೇವಾರತ್ನ, ಪ್ರತಿಭಾನ್ವಿತ ಯುವ ನಿರ್ದೇಶಕ ಅನೀಶ್ ಅಮೀನ್ ವೇಣೂರ್ ಇವರಿಗೆ ಯುವ ಕಲಾರತ್ನ, ಹಿರಿಯ ದೈವ ನರ್ತಕ ಲೋಕಯ್ಯ ಶೇರಾ ಗೆ ಯುವ ಧರ್ಮರತ್ನ ಹಾಗೂ ಹಿರಿಯ ಕಬ್ಬಡಿ ಆಟಗಾರ ರೋಹಿತ್ ಮಾರ್ಲ ಅವರಿಗೆ ಯೌವ ಕ್ರೀಡಾ ರತ್ನ ಬಿರಿದು ನೀಡಿ ಸನ್ಮಾನಿಸಲಾಗುಹುದು.
ಯುವಶಕ್ತಿ ಕಡೇಶಿವಾಲಯ 2000 ಕ್ಕೂ ಅಧಿಕ ಕಾರ್ಯಕರ್ತರನ್ನು ಒಳಗೊಂಡಿರುವ ಪ್ರತಿಷ್ಠಿತ ಸಮಾಜ ಸೇವಾ ಸಂಘಟನೆ. 2023 ರ ಜಿಲ್ಲಾ ಯುವಶಕ್ತಿ ಪ್ರಶಸ್ತಿ ಕೂಡ ಈ ಸಂಘಟನೆಗೆ ದೊರೆತಿರುತ್ತದೆ. ಸುಮಾರು ಐವತ್ತಕ್ಕೂ ಅಧಿಕ ಸನ್ಮಾನಗಳು ಅಭಿನಂದನೆಗಳು ಈ ಯುವಶಕ್ತಿಗೆ ಅರಸಿ ಬಂದಿದೆ. ಯುವಶಕ್ತಿ ಸೇವಾಪಥ, ಯುವಶಕ್ತಿ ರಕ್ತ ನಿಧಿ ಮತ್ತು ಯುವಶಕ್ತಿ ಉದ್ಯೋಗನಿಮಿತ್ತಂ ಈ ಮೂರು ವಿಂಗ್ ಗಳಾಗಿರುತ್ತವೆ.
ಈ ಎಲ್ಲಾ ಸೇವಾ ಪಥದ ಮೂಲಕ 75,72,502 ಲಕ್ಷ ರೂಪಾಯಿ, ಯುವಶಕ್ತಿ ಕಡೇಶಿವಾಲಯ 38,19,500 ಲಕ್ಷ ಸೇರಿದಂತೆ ಒಟ್ಟು ಸುಮಾರು ಒಂದು ಕಾಲು ಕೋಟಿ ರೂಪಾಯಿ ಮೊತ್ತವನ್ನು ಸಮಾಜಕ್ಕೆ ವಿನಿಯೋಗಿಸಿದ್ದಾರೆ. 14,520 ಯೂನಿಟ್ ರಕ್ತವನ್ನು ಯುವಶಕ್ತಿ ರಕ್ತನಿಧಿ ಮೂಲಕ ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ನೀಡಿರುತ್ತಾರೆ. ಉದ್ಯೋಗನಿಮಿತ್ತಂ ಮೂಲಕ ಸಾವಿರಾರು ಉದ್ಯೋಗಾಂಕ್ಷಿಗಳಿಗೆ ಕೆಲಸದ ನೆರವನ್ನು ಕೊಟ್ಟಿರುವ ಈ ಶ್ರೇಷ್ಠ ಸಮಾಜ ಸೇವಾ ಸಂಘಟನೆ, ಕಡೇಶಿವಾಲಯ ಯುವಶಕ್ತಿ.