2025ನೇ ವರ್ಷದ ಕಾಂಪ್ರಬೈಲು ಶ್ರೀ ಉಳ್ಳಾಲ್ತಿ ಅಮ್ಮನವರ ಮತ್ತು ಅಜ್ವರ ದೈವಂಗಳ ವರ್ಷಾವಧಿ ಜಾತ್ರೆ

  • 24 Mar 2025 05:10:52 PM

ಕಾಂಪ್ರಬೈಲು : ಮೊಗರ್ನಾಡು ಸಾವಿರ ಸೀಮೆಯ ಕಾಂಪ್ರಬೈಲು ಶ್ರೀ ಉಳ್ಳಾಲ್ತಿ ಅಮ್ಮನವರ ಮತ್ತು ಅಜ್ವರ ದೈವಂಗಳ ವರ್ಷಾವಧಿ ಜಾತ್ರೆ ದಿನಾಂಕ 27 ಮಾರ್ಚ್ 2025 ಗುರುವಾರದಿಂದ 31 ಮಾರ್ಚ್ 2025 ಸೋಮವಾರದವರೆಗೆ ಜರಗಲಿದೆ.

 

ದಿನಾಂಕ 30ನೇ ಮಾರ್ಚ್ 2025 ರಂದು ರಾತ್ರಿ 10.00 ಗಂಟೆಗೆ ಶ್ರೀ ಉಳ್ಳಾಲ್ತಿ ಅಮ್ಮನವರ ಕೆರೆ ನೇಮೋತ್ಸವ ನಡೆಯಲಿದೆ. ಅದೇ ದಿನ ರಾತ್ರಿ 8.00 ಗಂಟೆಗೆ ಗೀತ್ ಸಂಗೀತ್ ಉಪ್ಪಳ ಸಾದರಪಡಿಸುವ, ರಂಜಿತ್ ಬಾಬಾ ಕೋಡಿಬೈಲ್ ಮತ್ತು ಬಳಗದವರಿಂದ ಭಕ್ತಿಗಾನ ವೈಭವ ಜರಗಲಿದೆ.

 

ಐದು ದಿನಗಳಲ್ಲಿ ಶ್ರೀ ಕ್ಷೇತ್ರದಲ್ಲಿ ಜರಗುವ ಎಲ್ಲಾ ದೇವರ ಕಾರ್ಯಕ್ರಮಕ್ಕೆ, ಊರಿನ ಪರವೂರಿನ ಎಲ್ಲಾ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅಧ್ಯಕ್ಷರು ಮತ್ತು ಸರ್ವಸದಸ್ಯರು, ಉತ್ಸವ ಸಮಿತಿ, ಕಾಂಪ್ರಬೈಲು ವಿನಂತಿಸಿಕೊಂಡಿದ್ದಾರೆ.