ಕಡೇಶಿವಾಲಯ : ಬಂಟ್ವಾಳ ತಾಲೂಕು ಕಡೇಶಿವಾಲಯದ ಚಿಂತಾಮಣಿ ಶ್ರೀ ಲಕ್ಷೀ ನರಸಿಂಹ ದೇವಸ್ಥಾನದಲ್ಲಿ ಇನ್ನು ಮುಂದೆ ವರ್ಷಾವಧಿ ಜಾತ್ರಾ ಮಹೋತ್ಸವದ ಸಂಭ್ರಮ. ಇಂದು ದಿನಾಂಕ ಏಪ್ರಿಲ್ 1, 2025 ರಂದು ಗೊನೆ ಮುಹೂರ್ತ ಕಾರ್ಯಕ್ರಮವು ಆಡಳಿತ ಮಂಡಳಿ, ಅರ್ಚಕ ವೃಂದ ಮತ್ತು ಊರಿನ ಸಮಸ್ತ ಗಣ್ಯರ ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಜರಗಿತು.
ಇದೇ ಸಂದರ್ಭದಲ್ಲಿ ಏಪ್ರಿಲ್ 1 ರಿಂದ ಏಪ್ರಿಲ್ 22 ರವರೆಗೆ ನಡೆಯಲಿರುವ ಜಾತ್ರಾ ಕಾರ್ಯಕ್ರಮದ ಆಮಂತ್ರಣ ಪತ್ರ ಕೂಡ ಬಿಡುಗಡೆ ಮಾಡಲಾಯಿತು. ಧಾರ್ಮಿಕ ವಿಧಿವಿಧಾನ ಕಾರ್ಯಕ್ರಮವನ್ನು ದೇವಸ್ಥಾನದ ಅರ್ಚಕ ವೃಂದದವರು ನೆರವೇರಿಸಿದರು.
ಇಂದಿನ ಗೊನೆ ಮುಹೂರ್ತ ಮತ್ತು ಆಮಂತ್ರಣ ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಶೆಟ್ಟಿ ನುಲಿಯಾಳು, ಆಡಳಿತ ಮಂಡಳಿಯ ಸದಸ್ಯರುಗಳಾದ ಶ್ರೀ ಸಂಜೀವ ಪೂಜಾರಿ ದಾಸಕೋಡಿ, ಶ್ರೀ ಅಮರನಾಥ ಅಜಿಲ ಅರಿಕಲ್ಲು, ಶ್ರೀ ಈಶ್ವರ ಪೂಜಾರಿ ಹಿರ್ತಡ್ಕ, ಶ್ರೀ ಸತೀಶ್ ಚಂದ್ರ ಶೆಟ್ಟಿ ಅಮೈ ಬಾವಗುತ್ತು, ಶ್ರೀ ಚಿದಾನಂದ ಪೂಜಾರಿ ಕಡೇಶಿವಾಲಯ, ಶ್ರೀ ಶೀನ ನಾಯ್ಕ್ ನೆಕ್ಕಿಲಾಡಿ, ಶ್ರೀಮತಿ ಪ್ರೇಮ ಶಿವಪ್ರಸಾದ್ ಶೆಟ್ಟಿ ಮಿತ್ತಿಮಾರು, ಶ್ರೀಮತಿ ಶ್ರುತಿ ಹರಿಶ್ಚಂದ್ರ ಭಂಡಾರಿ ಕಾಡಬೆಟ್ಟು ಹಾಗೂ ಅರ್ಚಕ ವೃಂದ, ಸಿಬ್ಬಂದಿ ವರ್ಗ ಮತ್ತು ಭಕ್ತಾದಿಗಳು ಪಾಲ್ಗೊಂಡಿದ್ದರು.