ರಾಜ್ಯ ಬಜೆಟಿನಲ್ಲಿ ಅಲ್ಪಸಂಖ್ಯಾತರಿಗೆ ಲೆಕ್ಕಕ್ಕಿಂತ ಮೀರಿ ಅನುದಾನ : ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ವತಿಯಿಂದ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನಕ್ಕೆ ಕರೆ

  • 02 Apr 2025 05:40:55 PM

ಮಂಗಳೂರು : ರಾಜ್ಯ ಬಜೆಟಿನಲ್ಲಿ ಅಲ್ಪಸಂಖ್ಯಾತರಿಗೆ 4500 ಕೋಟಿ ಅನುದಾನ ಮತ್ತು ಸರಕಾರಿ ಗುತ್ತಿಗೆಯಲ್ಲಿ ಶೇ.4 ರಷ್ಟು ಅನುದಾನ ನೀಡಿರುವ ಬಗ್ಗೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ವತಿಯಿಂದ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನಕ್ಕೆ ಕರೆ ನೀಡಿದೆ.

 

ರಾಜ್ಯ ಸರಕಾರದ ಓಲೈಕೆ ರಾಜಕಾರಣ ಖಂಡಿಸಿ, ಹಿಂದೂ ರಾಷ್ಟ್ರ ಜಾಗೃತಿ ಆಂದೋಲನವನ್ನು ದಿನಾಂಕ 03 ಏಪ್ರಿಲ್ 2025ರ ಗುರುವಾರ ಸಮಯ 4.00 ಗಂಟೆಗೆ ಹಮ್ಮಿಕೊಳ್ಳಲಾಗುವುದು ಎಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

 

ಮಂಗಳೂರಿನ ಮಿನಿ ವಿಧಾನಸೌಧದ ಹತ್ತಿರ ಇರುವ ಕ್ಲಾಕ್ ಟವರ್ ನ ಎದುರುಗಡೆ ಈ ಸಮಾವೇಶ ನಡೆಯಲಿದ್ದು, ಹಿಂದೂ ಸಂಘಟನೆಯ ಗಣ್ಯರು ಈ ಆಂದೋಲನದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.