ಕಾರಿಂಜ : ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಕಾರಿಂಜದಲ್ಲಿ ಜಾತ್ರಾ ಮಹೋತ್ಸವ ಸಡಗರ

  • 12 Feb 2025 12:27:55 AM

ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಕಾರಿಂಜದಲ್ಲಿ ಜಾತ್ರಾ ಮಹೋತ್ಸವ 2025.

Bantwal, ಕಾರಿಂಜ : ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಶ್ರೀ ಕ್ಷೇತ್ರ ಕಾರಿಂಜದಲ್ಲಿ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ ಮತ್ತು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಇದೇ ಬರುವ ದಿನಾಂಕ ಫೆಬ್ರವರಿ 24 ಸೋಮವಾರದಿಂದ ಮಾರ್ಚ್ 4 ರ ಮಂಗಳವಾರದವರೆಗೆ ನಡೆಯಲಿದೆ. ಈ ದೇವರ ಕಾರ್ಯಕ್ರಮದ ಸಂದರ್ಭದಲ್ಲಿ ಶ್ರೀ ಕ್ಷೇತ್ರದಲ್ಲಿ ಹಸಿರು ಹೊರೆಕಾಣಿಕೆ ಮೆರವಣಿಗೆ, ಮಹಾಶಿವರಾತ್ರಿ ಜಾಗರಣೆ, ಚಂದ್ರ ಮಂಡಲ ಉತ್ಸವ, ಮಹಾರಥೋತ್ಸವ, ಕಟ್ಟೆ ಪೂಜೆ ಉತ್ಸವ ಸೇವೆಗಳು ನೆರವೇರಲಿದೆ.

 

ಶ್ರೀ ಕ್ಷೇತ್ರ ಕಾರಿಂಜದಲ್ಲಿ ಈ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ನಡೆಯಲಿರುವ ಕಾರ್ಯಕ್ರಮಗಳು ಈ ರೀತಿ ಇವೆ,

ಫೆಬ್ರವರಿ 24, ಸೋಮವಾರ;

ಸಂಜೆ 3.30 ಕ್ಕೆ ಹಸಿರು ವಾಣಿ ಹೊರೆಕಾಣಿಕೆ ಮೆರವಣಿಗೆ

ಸಂಜೆ 6.00 ಕ್ಕೆ ಪ್ರಾರ್ಥನೆ, ಧ್ವಜಾರೋಹಣ, ಸಪ್ತೋತ್ಸವ ಆರಂಭ.

 

ಫೆಬ್ರವರಿ 25, ಮಂಗಳವಾರ;

ಬೆಳಿಗ್ಗೆ 9.00 ಕ್ಕೆ ಗಣಹೋಮ, ಮದ್ಯಾಹ್ನ 12.30 ಕ್ಕೆ ಮಹಾಪೂಜೆ ನಂತರ ಅನ್ನ ಸಂತರ್ಪಣೆ.

 

ಫೆಬ್ರವರಿ 26, ಬುಧವಾರ;

ಮಹಾಶಿವರಾತ್ರಿ ಜಾಗರಣೆ ದಿನ, ಮದ್ಯಾಹ್ನ 12.00 ರಿಂದ ಮಹಾಪೂಜೆ

ಸಂಜೆ 5.00 ಕ್ಕೆ ಶ್ರೀ ಮಹಾಪರ್ವತಿ ಸನ್ನಿದಿಯಲ್ಲಿ "ತುಲಾಭಾರ ಸೇವೆ" ಮತ್ತು ಏಕಾದಶಿ ರುದ್ರಾಭಿಷೇಕ ಆರಂಭ.

ರಾತ್ರಿ 12.00 ರಿಂದ ರಂಗಪೂಜೆ, ಶತರುದ್ರಾಭಿಷೇಕ, ಮಹಾಪೂಜೆ ದರ್ಶನ ಬಲಿ ಮತ್ತು ಕಂಚು ಬೆಳಕು ಸೇವೆಗಳು.

 

ಫೆಬ್ರವರಿ 27, ಗುರುವಾರ; ಚಂದ್ರ ಮಂಡಲ ಉತ್ಸವ ನಡೆಯಲಿದೆ.

ಬೆಳಿಗ್ಗೆ 8.00 ರಿಂದ ಶ್ರೀ ಪಾರ್ವತಿ ಸನ್ನಿದಿಯಲ್ಲಿ ದರ್ಶನ ಬಲಿ, ಮದ್ಯಾಹ್ನ 12.00 ರಿಂದ ಮಹಾಪೂಜೆ ನಂತರ ಅನ್ನಸಂತರ್ಪಣೆ.

ರಾತ್ರಿ 8.00 ಕ್ಕೆ ಬಲ್ಲೋಡಿ ಮಾಗಣೆ ಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಆಗಮನ.

ರಾತ್ರಿ 12.00 ಕ್ಕೆ "ಪಾರ್ವತಿ ಪರಮೇಶ್ವರ ದೇವರ ಭೇಟಿ" ಚಂದ್ರ ಮಂಡಲ ಉತ್ಸವ

ರಾತ್ರಿ 4.00 ಕ್ಕೆ ಶಯನೋತ್ಸವ ಕವಟಬಂಧನ.

 

ಫೆಬ್ರವರಿ 28, ಶುಕ್ರವಾರ;

ಬೆಳಗ್ಗೆ 7.00 ಕ್ಕೆ ಕವಾಟೋದ್ಘಾಟನೆ ಶಯನ ಸೇವಾ ಪ್ರಸಾದನ ವಿತರಣೆ

ಬೆಳಿಗ್ಗೆ 11.30 ಕ್ಕೆ "ಮಹಾರಥೋತ್ಸವ", ದೈವದ ನೇಮೋತ್ಸವ

ಮದ್ಯಾಹ್ನ 1.00 ರಿಂದ, ಮಹಾಪೂಜೆ, ಮಹಾ ಅನ್ನಸಂತರ್ಪಣೆ

ರಾತ್ರಿ 6.00 ಕ್ಕೆ ಪಾರ್ವತಿ ಸನ್ನಿದಿಯಲ್ಲಿ ಬಲಿ ಉತ್ಸವ.

 

ಮಾರ್ಚ್ 1, ಶನಿವಾರ; ಕಟ್ಟೆ ಪೂಜೆ ಉತ್ಸವ

ಬೆಳಿಗ್ಗೆ 8.00 ರಿಂದ, ಶ್ರೀ ಪಾರ್ವತಿ ಸನ್ನಿದಿಯಲ್ಲಿ ದರ್ಶನ ಬಲಿ, ದರ್ಶನ ಪ್ರಸಾದ, ತಪ್ಪಂಗಾಯಿ

ಮದ್ಯಾಹ್ನ 12.00 ರಿಂದ ಮಹಾಪೂಜೆ ನಂತರ ಅನ್ನ ಸಂತರ್ಪಣೆ

ರಾತ್ರಿ 7.00 ರಿಂದ 10.00 ರ ತನಕ ಅನ್ನ ಸಂತರ್ಪಣೆ

ರಾತ್ರಿ 11.00 ಕ್ಕೆ "ಪಾರ್ವತಿ ಪರಮೇಶ್ವರ ದೇವರ ಭೇಟಿ", ಕಟ್ಟೆಪೂಜೆ ಉತ್ಸವಗಳು, ಶ್ರೀ ಭೂತ ಬಲಿ, ದೇವರ ಶಯನ, ಕವಾಟ ಬಂಧನ.

 

ಮಾರ್ಚ್ 2, ಆದಿತ್ಯವಾರ;

ಬೆಳಿಗ್ಗೆ 8.00 ಕ್ಕೆ ಕವಾಟೋದ್ಘಾಟನೆ, ಮದ್ಯಾಹ್ನ 12.00 ರಿಂದ ಮಹಾಪೂಜೆ ನಂತರ ಅನ್ನ ಸಂತರ್ಪಣೆ, ಸಂಜೆ 4.00 ರಿಂದ ಅವಭೃತ ಸ್ನಾನಕ್ಕೆ ಹೊರಡುವುದು. ರಾತ್ರಿ ವ್ಯಾಘ್ರಚಾಮುಂಡಿ ದೈವದ ನೇಮೋತ್ಸವ, ದೇವರ ಅವಭೃತ ಸ್ನಾನ, ಧ್ವಜಾರೋಹಣ .

 

ಮಾರ್ಚ್ 3, ಸೋಮವಾರ;

ಬೆಳಿಗ್ಗೆ 10.00 ರಿಂದ ಸಂಪ್ರೋಕ್ಷಣೆ, ಕಲಶ, ಮಹಾಪೂಜೆ, ಅನ್ನ ಸಂತರ್ಪಣೆ, ಮಹಾ ಮಂತ್ರಾಕ್ಷತೆ.

 

ಮಾರ್ಚ್ 4, ಮಂಗಳವಾರ;

ಶ್ರೀ ಕ್ಷೇತ್ರದ ನಾಗ ಸನ್ನಿದಿಯಲ್ಲಿ ಪರಮಾನಾಭಿಷೇಕ ಸಹಿತ ನಾಗ ತಂಬಿಲಗಳು, ವನದುರ್ಗೆಗೆ ಪರ್ವಾರಾಧನೆ.

 

ಮನು ಮುನಿಗಳು ತಪೋ ಶಕ್ತಿ ನೀಡಿದ ಕಾರಿಂಜೇಶ್ವರನ ಪುಣ್ಯಕ್ಷೇತ್ರದಲ್ಲಿ ಶಿವರಾತ್ರಿಯ ಪುಣ್ಯ ದಿನ ಭೂಕೈಲಾಸನಾಥನಿಗೆ ಸನಾತನ ಧರ್ಮದ ಕಲ್ಯಾಣಕ್ಕಾಗಿ "ಕೋಟಿ ಶಿವ ಪಂಚಾಕ್ಷರಿ ಪಠಣೆ" ಮಾಡುವ ಸಂಕಲ್ಪವನ್ನು ಇಟ್ಟುಕೊಂಡಿದ್ದಾರೆ. ಶಿವ ಪಂಚಾಕ್ಷರಿ ಪಠಣೆಗೆ ಇಂತಹ ಪುಣ್ಯ ಸ್ಥಳ ಮತ್ತು ಪುಣ್ಯವಾದ ದಿನ ಜೀವಿತ ಅವಧಿಗೆ ಸಿಗಬೇಕಾದರೆ ಭಕ್ತಾದಿಗಳ ಬರುವಿಕೆಯನ್ನು ನೋಂದಣಿ ಮೂಲಕ ಖಾತ್ರಿ ಪಡಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.

ದಿನಾಂಕ 26 ಫೆಬ್ರವರಿ 2025 ನೇ ಬುಧವಾರ ಸಂಜೆ 6 .00 ರಿಂದ ಶಿವ ಪಂಚಾಕ್ಷರಿ ಪಠನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶ್ರೀ ಕ್ಷೇತ್ರ ಕಾರಿಂಜದ, ಕಾರಿಂಜೇಶ್ವರನ ಸಾನಿಧ್ಯದಲ್ಲಿ ನಡೆಯುವ ಈ ಜಾತ್ರಾಮಹೋತ್ಸವಕ್ಕೆ ಸರ್ವರಿಗೂ ಆದರದ ಸ್ವಾಗತವನ್ನು ತಂತ್ರಿಗಳು, ಗ್ರಾಮಣಿಗಳು, ಅರ್ಚಕರು, ಸಿಬ್ಬಂದಿ ವರ್ಗ ಹಾಗೂ ಊರ ಹತ್ತು ಸಮಸ್ತರು ಶ್ರೀ ಕ್ಷೇತ್ರ ಕಾರಿಂಜ ಕೋರಿಕೊಂಡಿದ್ದಾರೆ.