ಬಂಟ್ವಾಳ, ಕುದ್ರೆಬೆಟ್ಟು: 'ಒಬ್ಬರ ಪುಸ್ತಕ ದಾನ, ನೂರಾರು ಮಕ್ಕಳ ಜ್ಞಾನವರ್ಧನೆಯ ಮೊದಲ ಹೆಜ್ಜೆಯಾಗಬಹುದು’ ಎಂಬ ಧ್ಯೇಯವಾಕ್ಯದೊಂದಿಗೆ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಜರುಗಿತು.
ಜೂನ್ 19, 2025ರ ಕುದ್ರೆಬೆಟ್ಟು ಸರ್ಕಾರಿ ಶಾಲೆಯಲ್ಲಿ ಪುಸ್ತಕ ವಿತರಣಾ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು. ಕಲಿಯುತ್ತಿರುವ ಮಕ್ಕಳಿಗೆ ಇಲ್ಲಿನ ಸ್ಥಳೀಯರಾದ, ಉದ್ಯಮಿ ಹಾಗೂ ದಾನಿಗಳಾದ ಶ್ರೀಯುತ ಸುಕುರ್ ಸಾಹೇಬ್ರು ಕುದ್ರೆಬೆಟ್ಟು ಉಚಿತವಾಗಿ ಪುಸ್ತಕ ವಿತರಣೆ ಮಾಡಿದರು. ನಂತರ ಅವರು ಭಾಷಣ ಮಾಡಿ ಮಕ್ಕಳಿಗೆ ಹುರಿದುಂಬಿಸಿದರು. ಉಚಿತವಾಗಿ ಪುಸ್ತಕಗಳನ್ನು ವಿತರಿಸುವ ಮೂಲಕ ಇವರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ದಾರಿದೀಪವಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು ಶ್ರೀಯುತ ವಿಠಲ್, ಶೌರ್ಯ ವಿಪತ್ತು ತಂಡದ ಅಧ್ಯಕ್ಷರಾದ ಶ್ರೀಯುತ ಮಾಧವ ಸಾಲ್ಯಾನ್, ಶಾಲಾ ಶಿಕ್ಷಕ ವೃoದದವರು, ಪೋಷಕರು, ಸಮಿತಿಯ ಸದಸ್ಯರು ಹಾಜರಿದ್ದರು. ಮುಖ್ಯ ಶಿಕ್ಷಕಿ ದೇವಿಕಾ ಬಿ. ಯವರು ಸ್ವಾಗತಿಸಿದರು. ಅಮಿತಾ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಮಮತಾ ಶೆಟ್ಟಿ ಸಹಶಿಕ್ಷಕಿ ಧನ್ಯವಾದ ತಿಳಿಸಿದರು. ವಿಶಾಲಾಕ್ಷಿ ಸಹ ಶಿಕ್ಷಕಿ, ಗೌರವ ಶಿಕ್ಷಕಿ ಸುಮಿತ್ರ ನಾಯ್ಕ್, ಅಮಿತಾ ಇವರು ಸಹಕರಿಸಿದರು.